ಜೈನ ಧರ್ಮದ ತ್ರಿರತ್ನಗಳು

ಪ್ರತಿ ಧರ್ಮದಲ್ಲೂ ಮೋಕ್ಷ ಸಾಧನೆಗೆ ಕೆಲವು ಮಾರ್ಗಗಳನ್ನು ಸೂಚಿಸಿರುವಂತೆ ಜೈನ ಧರ್ಮದಲ್ಲೂ ಮೂರು ಮಾರ್ಗಗಳಿವೆ ಇವುಗಳನ್ನು ತ್ರಿ ರತ್ನಗಳು ಎಂದು ಕರೆಯಲಾಗುತ್ತದೆ.

ಋಜು ವಿಶ್ವಾಸ (ನ್ಯಾಯವಾದ ನಂಬಿಕೆ), ಋುಜು ಜ್ಞಾನ (ಸರಿಯಾದ ಜ್ಞಾನ) ಮತ್ತು ಋಜು ಕಾರ್ಯ (ಉತ್ತಮ ನಡೆತೆ) ಇವೇ ಆ ತ್ರಿ ರತ್ನಗಳು. ನ್ಯಾಯವಾದ ನಂಬಿಕೆ ಎಂದರೆ ಮಹಾವೀರನ ಸರ್ವಜ್ಞತ್ವ ಮತ್ತು ಘನತೆ ನಿರ್ದೋಷತ್ವಗಳಲ್ಲಿ ನಂಬಿಕೆ.

ಇವುಗಳನ್ನು ಸರ್ವಸ್ವ ಎಂದು ನಂಬುವುದು. ಸರಿಯಾದ ಜ್ಞಾನವೆಂದರೆ, ದೇವರೇ ಇಲ್ಲವೆಂಬ ತತ್ವದ ಬಹುವ್ಯಾಪಕತೆಯನ್ನು ಅರ್ಥಮಾಡಿಕೊಂಡಿರುವುದು. ಋಜು ಕಾರ್ಯ ಅಥವಾ ಸಮ್ಯಕ್ ಆಚರಣೆಯ ಐದು ಮುಖ್ಯಾಂಶಗಳೆಂದರ; 1) ಕರುಣೆಯಿಂದ ಕೂಡಿದ ಅಹಿಂಸೆ 2) ತ್ಯಾಗದಿಂದ ಕೂಡಿದ ಸತ್ಯ 3) ಅಪರಾಧವರಿಯದ ಸಾಧು ಶೀಲತೆ 4) ಮನಸ್ಸಿನಲ್ಲಿ, ಮಾತಿನಲ್ಲಿ ಕೃತಿಯಲ್ಲಿ ಪರಿಶುದ್ಧತೆ 5) ಸಂಸಾರದಲ್ಲಿ ವಿರಕ್ತಿ.

ಜೈನ ಧರ್ಮವು ಅಹಿಂಸೆಯನ್ನು ಎಷ್ಟು ಒತ್ತು ಕೊಟ್ಟು ಪ್ರತಿಪಾದಿಸಿತೆಂದರೆ ಜೈನರು ಕೃಷಿ ಉದ್ಯೌಗವನ್ನು ಕೈಬಿಟ್ಟು ಬಿಟ್ಟರು. ಭೂಮಿ ಉಳುಮೆ ಮಾಡುವಾಗ ಹಾಗೂ ಕೊಯ್ಲು ಸಂದರ್ಭದಲ್ಲಿ ಅನೇಕ ಜೀವಿಗಳು ಮತ್ತು ಸಸ್ಯಗಳ ಹಿಂಸೆಗೆ ಕಾರಣವಾಗುತ್ತದೆ ಎಂಬುದು ಜೈನರು ಕೃಷಿ ಉದ್ಯೌಗವನ್ನು ಕೈಬಿಡಲು ಪ್ರಮುಖ ಕಾರಣ.

ವೆಬ್ದುನಿಯಾವನ್ನು ಓದಿ