ತಲಕಾಡು

WD
ಇದು ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ, ಪ್ರವಾಸಿ ತಾಣವೂ ಹೌದು. ಕಾವೇರಿಯ ಮಡಿಲಲ್ಲಿರುವ ಈ ಸ್ಥಳ ಟಿ ನರಸೀಪುರ ತಾಲೂಕಿನಲ್ಲಿದೆ.

ಮಳವಳ್ಳಿ ಮತ್ತು ಟಿ ನರಸೀಪುರದಿಂದ ಸುಮಾರು 30 ಕಿ. ಮೀ. ದೂರದಲಲಿ ಈ ಸ್ಥಳವಿದೆ. ದಟ್ಟವಾದ ಅರಣ್ಯದಿಂದಾಗಿ ಈ ಸ್ಥಳಕ್ಕೆ ತಲಕಾಡು ಎಂಬ ಹೆಸರು ಬಂದಿದೆ. ಗಂಗರ, ಚೋಳರು, ಹೊಯ್ಸಳರು ಈ ಪ್ರದೇಶವನ್ನು ಆಳಿದ್ದಾರೆ.

ಮರಳಿನಿಂದ ಆವೃತವಾಗಿರುವ ಈ ಸ್ಥಳ ನೋಡುಗರ ಆಕರ್ಷಣೆ. ಇಲ್ಲಿ ಕಾವೇರಿಯು ಯಾವುದೇ ಆರ್ಭಟವಿಲ್ಲದೆ, ಪ್ರಶಾಂತವಾಗಿ ಹರಿಯುತ್ತದೆ. ಈಜಾಡಲು ಇದು ಸೂಕ್ತ ಸ್ಥಳ. ಇಲ್ಲಿ ಬೋಟಿಂಗ್ ಕೂಡ ಮಾಡಬಹುದು. ಮರಳಿನಲ್ಲಿ ಅಡ್ಡಾಡಬಹುದು.

ಹೊಯ್ಸಳರು ಕಟ್ಟಿಸಿದ ಕೀರ್ತಿನಾರಾಯಣ ದೇವಾಲಯ, ವೈದ್ಯೇಶ್ವರ ದೇವಾಲಯ ಮತ್ತು ಗೌರಿ ಶಂಕರ ದೇವಾಲಯ ಶಿಲ್ಪಕಲೆಯ ಸಿರಿಯನ್ನು ಹೊಂದಿವೆ.

ವಿಜಯನಗರದ ರಾಜಪ್ರತಿನಿಧಿ ಶ್ರೀರಂಗರಾಯನು ತನ್ನ ಹೆಂಡತಿಯೊಂದಿಗೆ ವ್ಯಾದಿ ಪರಿಹಾರಕ್ಕಾಗಿ ಇಲ್ಲಿನ ವೈದ್ಯೇಶ್ವರನ ಅರ್ಚನೆಗೆ ಬಂದಿದ್ದ. ಆತ ಅಲ್ಲಿಯೇ ಖಾಯಿಲೆ ಉಲ್ಬಣಿಸಿ ಸತ್ತಹೋದ. ಸುದ್ದಿ ತಿಳಿದ ಮೈಸೂರಿನ ಒಡೆಯರು ಸೈನ್ಯ ಸಮೇತ ಬಂದು ಶ್ರೀರಂಗರಾಯನ ಹೆಂಡತಿ ಧರಿಸಿದ್ದ ಅತ್ಯಮೂಲ್ಯವೆಂದು ಪ್ರಸಿದ್ಧವಾಗಿದ್ದ ಮೂಗುತಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆಕೆ ತನ್ನ ಮೂಗುತಿಯನ್ನು ಮಾಲಂಗಿ ಮಡುವಿಗೆಸೆದಳು.

ಮಾಲಂಗಿ ಮಡುವಾಗಿ ತಲಕಾಡು ಮರುಳಾಗಿ ಮೈಸೂರು ರಾಜರಿಗೆ ಗಂಡು ಮಕ್ಕಳಾಗದಿರಲಿ ಎಂದು ಶಾಪ ಹಾಕಿದಳು ಎಂಬ ಕಥೆ ಇದೆ. ಸುಮಾರು 12-13 ವರ್ಷಕ್ಕೆ ಒಮ್ಮೆ ಇಲ್ಲಿ ಪಂಚಲಿಂಗ ದರ್ಶನ ಎಂಬ ಮಹೋತ್ಸವ ನಡೆಯುತ್ತದೆ.

ವೆಬ್ದುನಿಯಾವನ್ನು ಓದಿ