ಲಕ್ಷ್ಮೀ ಪೂಜೆಯ ನಂತರ ಹೀಗೆ ಮಾಡಿದರೆ ಧನಾಭಿವೃದ್ಧಿಯಾಗುವುದು ಖಂಡಿತ

ಸೋಮವಾರ, 26 ನವೆಂಬರ್ 2018 (07:39 IST)
ಬೆಂಗಳೂರು : ಧನಾಭಿವೃದ್ಧಿಗಾಗಿ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಈ ನಿಯಮಗಳನ್ನು ಅನುಸರಿಸಿದರೆ  ಧನಾಭಿವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.


ಜ್ಯೋತಿಷ್ಯ  ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿಗೆ ಕಪಾಟಿಡುವುದು ಶುಭ. ಲಕ್ಷ್ಮಿ ಪೂಜೆ ಮಾಡಿದ ನಂತ್ರ ಕಪಾಟಿನಲ್ಲಿ ಹಣ ಹಾಗೂ ಆಭರಣವನ್ನಿಡುವ ಜೊತೆಗೆ ಲಕ್ಷ್ಮಿ ದೇವಿಯ ಮೂರ್ತಿಯನ್ನಿಟ್ಟರೆ ಧನಾಗಮನವಾಗಲಿದೆ.


ಲಕ್ಷ್ಮಿ ಪೂಜೆ ವೇಳೆ ಗೋಮತಿ ಚಕ್ರವನ್ನಿಟ್ಟು ಪೂಜೆ ಮಾಡಬಹುದು. ನಂತರ ಕಪಾಟಿನಲ್ಲಿ ಕೆಂಪು ಬಟ್ಟೆಯಿಟ್ಟು ಅದರ ಮೇಲೆ ಗೋಮತಿ ಚಕ್ರವನ್ನಿಡಬೇಕು. ಲಕ್ಷ್ಮಿ ಪೂಜೆಯಲ್ಲಿ ಕವಡೆಗೂ ಮಹತ್ವವಿದೆ. ಪೂಜೆ ನಂತರ ಕೆಂಪು ಬಟ್ಟೆಯಲ್ಲಿ ಸುತ್ತಿ ಕವಡೆಯನ್ನು ಕಪಾಟಿನಲ್ಲಿಡಿ. ಪೂಜೆಗೆ ಇಟ್ಟ ಆಭರಣ ಹಾಗೂ ನಾಣ್ಯಗಳನ್ನು ಕೂಡ ನೀವು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ