ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 27 ಏಪ್ರಿಲ್ 2022 (07:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಯಾಗದು. ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ. ಆದರೆ ಭವಿಷ್ಯದ ಬಗ್ಗೆ ಚಿಂತೆ ಕಾಡೀತು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ವೃಷಭ: ಉದ್ಯೋಗದಲ್ಲಿ ಅಧಿಕ ಶ್ರಮದಿಂದಾಗಿ ದೇಹಾಯಾಸವಾದೀತು. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಉನ್ನತಿಯ ಯೋಗವಿದೆ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಮಿಥುನ: ವೃತ್ತಿರಂಗದಲ್ಲಿ ನಿಮಗೆ ಅಡೆತಡೆಯಾಗಿದ್ದ ವಿಚಾರಗಳು ನಿವಾರಣೆಯಾಗಲಿವೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಕರ್ಕಟಕ: ಸನ್ಮಿತ್ರರ ಸಹವಾಸದಿಂದ ನಿಮ್ಮ ಯೋಚನಾ ಲಹರಿ ಬದಲಾಗಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸರಕಾರಿ ಕೆಲಸಗಳಲ್ಲಿ ಮುನ್ನಡೆ ಕಂಡುಬಂದೀತು. ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಅನುಕೂಲಕರ ವಾತಾವರಣವಿದ್ದರೂ ತೃಪ್ತಿ ಇರದು. ಮನಸ್ಸಿಗೆ ಋಣಾತ್ಮಕ ಚಿಂತೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಣೆಯಾಗಲಿದೆ.

ಕನ್ಯಾ: ವ್ಯಾಪಾರೀ ವರ್ಗದವರಿಗೆ ನಂಬಿದ್ದವರಿಂದಲೇ ವಂಚನೆಯಾಗುವ ಸಾ‍ಧ್ಯತೆ. ಸಂಗಾತಿಯ ಸಮಯೋಚಿತ ಸಲಹೆಗಳನ್ನು ಪಾಲಿಸುವುದು ಉತ್ತಮ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ.

ತುಲಾ: ಹಣಕಾಸಿನ ಖರ್ಚು ವೆಚ್ಚಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ವೃಶ್ಚಿಕ: ಅಧಿಕ ಓಡಾಟ, ಕೆಲಸಗಳಿಂದಾದಿ ದೇಹಾಯಾಸವಾಗುವ ಸಾಧ್ಯತೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ಪ್ರೀತಿ ಪಾತ್ರರ ಸಾಂತ್ವನ ಮನಸ್ಸಿಗೆ ಖುಷಿ ನೀಡಲಿದೆ.

ಧನು: ನಿಮ್ಮ ಕೆಲಸ ಕಾರ್ಯಗಳಲ್ಲಿ ಬೇರೆಯವರ ಹಸ್ತಕ್ಷೇಪ ಬೇಸರವುಂಟು ಮಾಡೀತು. ಮಕ್ಕಳ ಬಗ್ಗೆ ಅನಗತ್ಯ ಚಿಂತೆ ಬೇಡ. ವ್ಯಾವಹಾರಿಕವಾಗಿ ಅಡೆತಡೆಯಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ದೇವರ ಪ್ರಾರ್ಥನೆ ಮಾಡಿ.

ಮಕರ: ನವದಂಪತಿಗಳಿಗೆ ಮಧು ಚಂದ್ರದ ಭಾಗ್ಯ ಒಲಿದು ಬರಲಿದೆ. ನೆರೆಹೊರೆಯವರ ಸಲಹೆಗಳನ್ನು ಅಲಕ್ಷಿಸುವುದು ಬೇಡ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಅನಗತ್ಯ ಚಿಂತೆ ಬೇಡ.

ಕುಂಭ: ಮಾತಿನ ಮೂಲಕವೇ ಇತರರನ್ನು ಮರಳು ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕ ಕೆಲಸಗಳು ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಕೆಲಸ ಹೆಚ್ಚಾಗಲಿದೆ.

ಮೀನ: ಅನಿವಾರ್ಯವಾಗಿ ದೂರ ಪ್ರಯಾಣ ರದ್ದು ಮಾಡಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ