ಮಂಗಳವಾರ ಮಾಡುವ ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲಾ ದೋಷಗಳು ಪರಿಹಾರವಾಗುತ್ತದೆಯಂತೆ

ಮಂಗಳವಾರ, 25 ಸೆಪ್ಟಂಬರ್ 2018 (19:27 IST)
ಬೆಂಗಳೂರು : ಹಿಂದೂಗಳು ಪೂಜಿಸುವ ದೇವರುಗಳಲ್ಲಿ  ಶ್ರೀರಾಮನ ಭಕ್ತ ಹನುಮಂತ ಕೂಡ ಒಬ್ಬ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡಿದರೆ ಒಳ್ಳೆಯದು ಎಂದು ಭಾವಿಸಲಾಗಿದೆ. ನೆಮ್ಮದಿಯ ಜೀವನ ಬಯಸುವವರು ಶ್ರದ್ಧೆ, ಭಕ್ತಿಯಿಂದ ಹನುಮಂತನ ಪೂಜೆ ಮಾಡಿದ್ರೆ ಸಾಕು.


ಸರ್ವ ಸುಖ, ಗೌರವಗಳಿಗಾಗಿ ಮಂಗಳವಾರ ವೃತ ಮಾಡುವುದು ಬಹಳ ಉತ್ತಮ. ಈ ವೃತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು. ರಾತ್ರಿ ಮಾತ್ರ ಭೋಜನ ಮಾಡಬೇಕು. 21 ವಾರಗಳ ಕಾಲ ಈ ವೃತವನ್ನು ಮಾಡಬೇಕಾಗುತ್ತದೆ. ಈ ವೃತದಿಂದ ಮನುಷ್ಯ ಮಾಡಿದ ಎಲ್ಲ ದೋಷಗಳೂ ನಷ್ಟವಾಗುತ್ತವೆ.


ವೃತದ ಪೂಜೆಯ ವೇಳೆ ಕೆಂಪು ಹೂ ಅರ್ಪಣೆ ಮಾಡಬೇಕು. ಹಾಗೆ ಕೆಂಪು ಬಟ್ಟೆಯನ್ನು ಧರಿಸಬೇಕು. ಹನುಮಂತನ ಪೂಜೆ ಮಾಡುವ ಜೊತೆಗೆ ಹನುಮಂತನ ಕಥೆಯನ್ನು ಓದಬೇಕು. ಹನುಮಂತನಿಗೆ ತೆಂಗಿನ ಕಾಯಿ, ಧೂಪದ್ರವ್ಯ, ದೀಪ, ಕುಂಕುಮಗಳನ್ನು ಅರ್ಪಿಸಿ. ನಿಯಮ ಬದ್ಧವಾಗಿ ಮಂಗಳವಾರದ ಪೂಜೆ ಮಾಡುವುದರಿಂದ ಬಂದ ಕಷ್ಟಗಳೆಲ್ಲ ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ