ಬೆಂಗಳೂರು: ಗುರು ದೆಶೆ ಬಂದರೆ ಎಲ್ಲವೂ ಶುಭವಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಗುರು ದೆಶೆ ಎಲ್ಲಾ ಬಾರಿಯೂ ಒಳ್ಳೆಯದು ಮಾಡಲ್ಲ. ಗುರು ದೆಶೆಯ ಅಡ್ಡಪರಿಣಾಮವೂ ಅಷ್ಟೇ ಕೆಟ್ಟದಾಗಿರುತ್ತದೆ.
ಗುರು ದೆಶೆ ತಿರುಗಿಬಿದ್ದರೆ ಯಾವೆಲ್ಲಾ ಅಡ್ಡಪರಿಣಾಮಗಳಾಗುತ್ತವೆ ಎಂಬುದನ್ನು ನೋಡೋಣ. ಗುರುಗ್ರಹವು ದೋಷಪೂರಿತ ಮನೆಯಲ್ಲಿದ್ದರೆ ಸಾಕಷ್ಟು ಕೆಟ್ಟ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ನಮ್ಮ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಹಿನ್ನಡೆ, ಸೋಲು ಕಂಡುಬರಬಹುದು.
ಅಷ್ಟೇ ಅಲ್ಲ, ಅನಗತ್ಯ ವಿಚಾರಗಳಿಗೆ ವಿಪರೀತ ಖರ್ಚು ಮಾಡುವುದು, ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪುವುದು ಇತ್ಯಾದಿ ಕಂಡಬರಬಹುದು. ವಿದ್ಯಾರ್ಥಿಗಳಿರಲಿ, ಉದ್ಯೋಗಸ್ಥರಿರಲಿ ತಮ್ಮ ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಸಾಧಿಸಲು ಸಾಧ‍್ಯವಾಗದೇ ಚಂಚಲ ಮನೋಭಾವ ಕಂಡುಬಂದೀತು.
ಮುಖ್ಯವಾಗಿ ಹಣಕಾಸಿನ ನಷ್ಟ, ವಿಪರೀತ ಸಾಲ ಇತ್ಯಾದಿ ಸಮಸ್ಯೆಗಳು ಎದುರಾಗಿ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾದೀತು. ಹೀಗಾಗಿ ಗುರುಗ್ರಹದ ಋಣಾತ್ಮಕ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಗುರು ಗ್ರಹಕ್ಕೆ ಸಂಬಂಧಪಟ್ಟ ಶ್ಲೋಕ, ಮಂತ್ರಗಳನ್ನು ಪಠಿಸಿದರೆ ಉತ್ತಮ. ಪ್ರತಿನಿತ್ಯ ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ.