ಮನೆಯ ಸಮಸ್ಯೆ ದೂರವಾಗಲು ಈ ಮಂತ್ರವನ್ನು ರಾಹುಕಾಲದಲ್ಲಿ ಜಪಿಸಿ
ಗುರುವಾರ, 6 ಆಗಸ್ಟ್ 2020 (07:23 IST)
ಬೆಂಗಳೂರು : ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೂಡ ಶಾಂತಿ, ನೆಮ್ಮದಿಇರುವುದಿಲ್ಲ. ಅಂತವರು ರಾಹುಕಾಲದಲ್ಲಿ ಈ ಮಂತ್ರವನ್ನು ಪಠಿಸಿದರೆ ಎಲ್ಲಾ ಸಮಸ್ಯೆ ಪರಿಹಾರವಾಗುತ್ತದೆ.
ಮನೆಯಲ್ಲಿ ಇಂತಹ ಸಮಸ್ಯೆಗಳು ಉದ್ಭವವಾಗಲು ಕಾರಣ ನಕರಾತ್ಮಕ ಶಕ್ತಿಗಳು. ಕಾಲಭೈರವ ದೇವರನ್ನು ಪೂಜಿಸಿದರೆ ಮನೆಯೊಳಗೆ ಬರುವ ನಕರಾತ್ಮಕ ಶಕ್ತಿಗಳನ್ನು ನಾಶ ಮಾಡುತ್ತಾರೆ. ಆದಕಾರಣ ಚಂಡಿಕಾ ಕಾಲಭೈರವನ ಮಂತ್ರವನ್ನು ಪಠಿಸಿದರೆ ಕುಟುಂಬ ಸಮಸ್ಯೆ ದೂರವಾಗುತ್ತದೆ.
“ಓಂ ಶ್ರೀ ಗುರುಭ್ಯೋ ನಮಃ”
“ಓಂ ಶ್ರೀ ಕಾಲಭೈರವಾಹೀ ನಮಃ”
“ಓಂ ಶ್ರೀ ಮಾತೃಯೇ ನಮಃ”
“ಓಂ ಶ್ರೀ ಕ್ಷೇತ್ರಪಾಲಾಯ ಪ್ರಸಿದ ಪ್ರಸಿದ ಸ್ವಾಹ”
ಈ ಮಂತ್ರದ ಪ್ರತಿಯೊಂದು ಸಾಲನ್ನು 3 ಮೂರು ಬಾರಿ ಪಠಿಸಬೇಕು. ಹಾಗೇ ಇದನ್ನು ರಾಹುಕಾಲದಲ್ಲಿ ಪಠಿಸಿದರೆ ಉತ್ತಮ.