ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಲಾಫಿಂಗ್ ಬುದ್ಧನನ್ನು ಇಡಬೇಡಿ

ಬುಧವಾರ, 20 ಮಾರ್ಚ್ 2019 (09:55 IST)
ಬೆಂಗಳೂರು : ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ಲಾಫಿಂಗ್ ಬುದ್ಧನನ್ನು ಎಲ್ಲರೂ ಮನೆಯಲ್ಲಿ ಇಡುತ್ತಾರೆ. ಆದರೆ  ಶಾಸ್ತ್ರಗಳ ಪ್ರಕಾರ ಲಾಫಿಂಗ್ ಬುದ್ಧನನ್ನು ಇಡಲು ಕೆಲ ನಿಯಮಗಳಿವೆ. ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದ್ರೆ ಸುಖ, ಶಾಂತಿ, ಆರ್ಥಿಕ ವೃದ್ಧಿ ಬದಲು ನಷ್ಟ, ಅಶಾಂತಿ, ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೊಳಗಾಗಬೇಕಾಗುತ್ತದೆ.


ಲಾಫಿಂಗ್ ಬುದ್ಧನನ್ನು ಮನೆಯ ಮುಖ್ಯದ್ವಾರದ ಬಳಿ ಇಡಬೇಕು. ಮನೆಗೆ ಬರುವ ಪ್ರತಿಯೊಂದು ಮುಖವನ್ನು ಲಾಫಿಂಗ್ ಬುದ್ಧ ನೋಡಬೇಕು. ಹಾಗೆ ಲಾಫಿಂಗ್ ಬುದ್ಧನನ್ನು ನೆಲದಿಂದ ಮೂರು ಅಡಿ ಎತ್ತರದಲ್ಲಿ ಇಡಬೇಕು.


ಲಾಫಿಂಗ್ ಬುದ್ಧನನ್ನು ಶೌಚಾಲಯ, ಸ್ನಾನಗೃಹ, ಮಲಗುವ ಕೋಣೆ, ಊಟದ ಟೇಬಲ್ ಬಳಿ ಇಡಬಾರದು. ಈ ಸ್ಥಳಗಳಲ್ಲಿ ಲಾಫಿಂಗ್ ಬುದ್ಧನನ್ನಿಟ್ಟರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.


ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಲಾಫಿಂಗ್ ಬುದ್ಧನನ್ನು ಎಂದೂ ನೆಲದ ಮೇಲೆ ಇಡಬಾರದು. ಲಾಫಿಂಗ್ ಬುದ್ಧನನ್ನು ಪೂಜಿಸುವ ಜಾಗದಲ್ಲಿ, ಪವಿತ್ರ ಸ್ಥಳದಲ್ಲಿ ಇಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ