ಮಾಟಮಂತ್ರ ದೋಷಗಳಿಂದ ಮುಕ್ತರಾಗಲು ಕಾರ್ತಿಕ ಮಾಸದಂದು ಹೀಗೆ ಮಾಡಿ
ಶನಿವಾರ, 13 ಜುಲೈ 2019 (05:53 IST)
ಬೆಂಗಳೂರು : ಒಬ್ಬ ವ್ಯಕ್ತಿಯ ಏಳಿಗೆ ಸಹಿಸದ ಆತನ ಶತ್ರುಗಳು ಆತ ಹಾಳಾಗಿ ಹೋಗಲೆಂದು ಮಾಟಮಂತ್ರಗಳನ್ನು ಮಾಡುತ್ತಾರೆ. ಇದರಿಂದ ಆತ ಜೀವನದಲ್ಲಿ ಅನೇಕ ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಾಟಮಂತ್ರ ಸಮಸ್ಯೆಯಿಂದ ಆತನಿಗೆ ಪರಿಹಾರ ದೊರಕಬೇಕೆಂದರೆ ಕಾರ್ತಿಕ ಮಾಸದಂದು ಹೀಗೆ ಮಾಡಿ.
ನಮ್ಮ ಧರ್ಮ ಶಾಸ್ತ್ರದ ಪ್ರಕಾರ ದುಷ್ಟ ಶಕ್ತಿಗಳ ನಿಗ್ರಹಿಸುವಂತಹ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಬಿಲ್ವಾರ್ಚನೆಯನ್ನು ಮಾಡಿ, ಕ್ಷೀರಾಭಿಷೇಕವನ್ನು ಮಾಡಿ, ಏಕಾದಶ ರುದ್ರಾಭಿಷೇಕಗಳನ್ನು ಮಾಡಿಸಿ. ಇದರಿಂದ ಯಾವುದೇ ದುಷ್ಟಶಕ್ತಿಗಳ ಕಾಟವಿದ್ದರೂ ದೂರವಾಗುತ್ತದೆಯಂತೆ.
ಅಲ್ಲದೇ ಇನ್ನು ಕಂಕಣ ಭಾಗ್ಯ ಕೂಡಿಬಾರದ ಹಾಗೂ ದಾಂಪತ್ಯ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಿರುವ ಹೆಣ್ಣುಮಕ್ಕಳು ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಬಿಲ್ವಾರ್ಚನೆಯನ್ನು ಮಾಡಿದರೆ ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡಿರುವ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಸುಖಜೀವನ ಪ್ರಾಪ್ತಿಯಾಗುತ್ತದೆಯಂತೆ.