ಹುಣ್ಣಿಮೆಯ ದಿನ ಯಾರೋಂದಿಗೂ ಮಾತನಾಡದೆ ಮುಂಜಾನೆ ಹೋಗಿ ನಾಲ್ಕು ಬಾವಿ ನೀರು ತಂದು ಬಳಿಕ ಹುತ್ತವನ್ನು ಪೂಜಿಸಿ ಅದರ ಮಣ್ಣನ್ನು ತರಬೇಕು. ಇದು ಬೆಳಿಗ್ಗೆ 7 ಗಂಟೆಯೊಳಗೆ ಮಾಡಬೇಕು. ಬಳಿಕ ಇಡಿ ದಿನ ಉಪವಾಸವಿರಬೇಕು. ಆದರೆ ಹಾಲನ್ನು ಕುಡಿಯಬಹುದು.
ಆಮೇಲೆ ಸೂರ್ಯ ಮುಳುಗಿದ ವೇಳೆ ಹಸುವಿನ ಹಾಲಿನಲ್ಲಿ ಆ ಹುತ್ತದ ಮಣ್ಣನ್ನು ಬೆರೆಸಿ ಮೈಗೆ ಲೇಪಿಸಿಕೊಂಡು ಒಂದು ಕೋಣೆಯಲ್ಲಿ ಬೆತ್ತಲಾಗಿ ಕುಳಿತು ‘ಓಂ ನಮೋ ಭಗವತೆ ಕಾಮರೂಪೀನೆ ಮಹಾಬಲಾಯ ನಾಗಾಧಿಪತಿಯೇ ಸ್ತಾಹಃ’ ಮಂತ್ರವನ್ನು 108 ಬಾರಿ ಜಪಿಸಿ. ಬಳಿಕ ನಾಲ್ಕು ಬಾವಿಯಿಂದ ತಂದ ನೀರನ್ನು ಒಟ್ಟಿಗೆ ಬೆರೆಸಿ ಸ್ನಾನ ಮಾಡಿ. ತೊಗರಿಬೇಳೆ ದಾನ ಮಾಡಿ ಯಾವುದಾದರೊಂದು ಪ್ರಾಣಿಗೆ ಊಟ ಹಾಕಿ. ಹೀಗೆ ಮಾಡಿದರೆ ಸರ್ವ ಸರ್ಪದೋಷಗಳು ನಿವಾರಣೆಯಾಗುತ್ತದೆ.