ಜಾತಕದಲ್ಲಿರುವ ಯಾವುದೇ ದೋಷ ನಿವಾರಣೆಯಾಗಲು ತೆಂಗಿನಕಾಯಿಯಿಂದ ಹೀಗೆ ಮಾಡಿ

ಶುಕ್ರವಾರ, 28 ಜೂನ್ 2019 (08:34 IST)
ಬೆಂಗಳೂರು : ಹಿಂದೂ ಶಾಸ್ತ್ರದಲ್ಲಿ ತೆಂಗಿನಕಾಯಿಗೆ ಮಹತ್ತರವಾದ ಸ್ಥಾನವಿದೆ. ತೆಂಗಿನಕಾಯಿ ಇಲ್ಲದೇ ದೇವರ ಪೂಜೆ, ಯಾವುದೇ ಶುಭ ಕಾರ್ಯವೂ ಪೂರ್ಣ ಎನಿಸಿಕೊಳ್ಳವುದಿಲ್ಲ. ಅಲ್ಲದೇ ಇದು ನಕಾರಾತ್ಮಕ ಶಕ್ತಿಯನ್ನು ಹೊರದೋಡಿಸುವ ಶಕ್ತಿಯನ್ನು ಸಹ ಹೊಂದಿದೆ.




ಶನಿ ದೋಷ, ರಾಹು, ಕೇತು, ದೋಷವಿದ್ದರೆ ಸರ್ಪ ದೋಷಗಳಿದ್ದರೆ  ಒಂದು ಒಣಗಿದ ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದನ್ನು ಬಾಯಿಯ ಆಕಾರದಲ್ಲಿ ಕತ್ತರಿಸಿ ಅದರೊಳಗೆ ಐದು ವಿಧದ ಒಣಗಿದ ಹಣ್ಣುಗಳು ಹಾಗೂ ಐದು ಸಕ್ಕರೆ ಅಚ್ಚನ್ನು ಹಾಕಿ ನಂತರ ಆ ತೆಂಗಿನಕಾಯಿಯ ಬಾಯಿಯನ್ನು ಮುಚ್ಚಬೇಕು. ಅಶ್ವತ್ಥ ಮರದ ಕೆಳಗೆ ಅಂದರೆ ಅರಳಿ ಮರದ ಕೆಳಗೆ ಮಣ್ಣನ್ನು ಅಗೆದು ಅಲ್ಲಿ ಈ ತೆಂಗಿನ ಕಾಯಿಯನ್ನು ಮುಚ್ಚಿ ಬರಬೇಕು. ಹೀಗೆ ಮಾಡಿ ಬರುವಾಗ ಅದನ್ನು ಯಾವುದೇ ಕಾರಣಕ್ಕೂ ತಿರುಗಿ ಹಿಂದೆ ನೋಡಬಾರದು .


ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಿದ್ದರೆ ಶುಕ್ರವಾರ ಲಕ್ಷ್ಮೀ ದೇವಿಯ ದೇವಸ್ಥಾನಕ್ಕೆ ಹೋಗಿ ಜುಟ್ಟು ಇರುವ ತೆಂಗಿನ ಕಾಯಿಯನ್ನು ಗುಲಾಬಿ ಹೂವು   ಮತ್ತು ಕಮಲದ ಹೂವಿನ ಮಾಲೆಯನ್ನು ಅರ್ಪಿಸಿ. ನಂತರ ಬಿಳಿ ಬಟ್ಟೆಯನ್ನು ಅದರ ಜೊತೆಗೆ ಮೊಸರನ್ನು ಸಮರ್ಪಿಸಬೇಕು. ನಂತರ ದೇವಿಗೆ ಪೂಜೆ ಮಾಡಿ ಕರ್ಪೂರದ ಆರತಿಯನ್ನು ಭಕ್ತಿ ಶ್ರದ್ಧೆಯಿಂದ ಬೆಳಗಬೇಕು .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ