ಈ ಮೂರು ರಾಶಿಯವರು ಕೆಂಪುದಾರವನ್ನು ಕೈಗೆ ಕಟ್ಟಿಕೊಂಡರೆ ಏನಾಗುತ್ತದೆ ಗೊತ್ತಾ?
ಭಾನುವಾರ, 23 ಜೂನ್ 2019 (06:37 IST)
ಬೆಂಗಳೂರು : ಹಲವರು ಕೈಗಳಿಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರಗಳನ್ನು ಕಟ್ಟಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಕೆಲವರು ದಾರಗಳನ್ನು ಸ್ಟೈಲಿಶ್ ಲುಕ್ ಗಾಗಿ ಕೈಗಳಲ್ಲಿ ಧರಿಸುತ್ತಾರೆ. ಇನ್ನೂ ಕೆಲವರು ದೇವರ ಮೇಲಿನ ಭಕ್ತಿಯಿಂದ ದಾರಗಳನ್ನು ಕಟ್ಟಿಕೊಳ್ಳುತ್ತಾರೆ.
ಈ ಕೆಂಪುದಾರ ನಿಮ್ಮಲ್ಲಿರುವ ಕೆಟ್ಟ ಶಕ್ತಿಯನ್ನು ದೂರವಾಗಿ ಒಳ್ಳೆಯ ಶಕ್ತಿಯನ್ನು ತುಂಬಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಮೂರು ರಾಶಿಯವರು ಕೆಂಪು ದಾರವನ್ನು ಕಟ್ಟಿಕೊಂಡರೆ ತುಂಬಾ ಒಳ್ಳೆಯದು.
ಸಿಂಹ : ಈ ರಾಶಿಯವರು ನಿಮ್ಮ ಇಷ್ಟದ ದೇವರನ್ನು ಪ್ರಾರ್ಥಿಸಿ ಈ ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡರೆ ಇದರಿಂದ ನಿಮ್ಮಲ್ಲಿರುವ ನಕರಾತ್ಮಕ ಶಕ್ತಿ ದೂರವಾಗಿ ಸಕರಾತ್ಮಕ ಶಕ್ತಿಯನ್ನು ಪಡೆಯುತ್ತೀರಿ. ಅಲ್ಲದೇ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಕರ್ಕ ರಾಶಿ: ಈ ರಾಶಿಯವರು ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡರೆ ನಿಮ್ಮ ಜೀವನದಲ್ಲಿ ಎದುರಾದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಇದು ದೂರಮಾಡುತ್ತದೆ.
ಮಿಥುನ ರಾಶಿ: ಈ ರಾಶಿಯವರು ಕೆಂಪು ದಾರವನ್ನು ಧರಿಸಿದರೆ ಅವರಿಗೆ ಎಷ್ಟೇ ಸಮಸ್ಯೆಗಳಿದ್ದರೂ ಅವರು ಮಾಡಿದ ಕೆಲಸಕ್ಕೆ ಯಶಸ್ಸು ಸಿಗುತ್ತದೆ.