ಬೆಂಗಳೂರು : ಹೊರಗಡೆ ಪ್ರಯಾಣ ಮಾಡುವಾಗ ಕೆಲವರು ಶಾಸ್ತ್ರಗಳನ್ನು ನೋಡುತ್ತಾರೆ. ಆದಕಾರಣ ಯಾವ ವಾರ ಪ್ರಯಾಣ ಬೆಳೆಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
*ಭಾನುವಾರ ಹೊರಗಡೆ ಹೋದಾಗ ಆಯಸವಾಗುವ ಸಂಭವವಿದೆ ಆದಕಾರಣ ಅಂದು ಹೊರಗೆ ಹೋಗುವಾಗ 2ಚಮಚ ಮಜ್ಜಿಗೆ ಬಾಯಿಗೆ ಹಾಕಿಕೊಂಡು ಹೋದರೆ ಉತ್ತಮ.
*ಸೋಮವಾರ ಸುಖಕರವಾದ ಪ್ರಯಾಣ ನಿಮ್ಮದಾಗಬೇಕೆಂದರೆ ಹಾಲು, ಸಕ್ಕರೆ ಬೆರೆಸಿದ ಅನ್ನವನ್ನು ತಿಂದು ಹೋಗಿ.
*ಮಂಗಳವಾರ ಗಟ್ಟಿ ಮೊಸರಿಗೆ ಹಾಲು ಬೆರೆಸಿ ತಿಂದರೆ ಅಂದಿನ ಪ್ರಯಾಣ ಫಲ ನೀಡುತ್ತದೆ.
*ಬುಧವಾರ ಪ್ರಯಾಣ ಬೆಏಳಸಿದರೆ ಉತ್ತಮ. ಅಂದು ಹುಳಿ ಮೊಸರಿಗೆ ಬೆಲ್ಲ ಬೆರೆಸಿ ತಿಂದರೆ ೊಳ್ಳೆಯದಾಗುತ್ತದೆ.
*ಗುರುವಾರ ಪ್ರಯಾಂ ಬೆಳೆಸುವಾಗ1 ಗ್ಲಾಸ್ ಶುದ್ಧ ನೀರನ್ನು ಸೇವಿಸಿದರೆ ಒಳ್ಳೆಯದು.
*ಶುಕ್ರವಾರ ಪ್ರಯಾಣ ಬೆಳೆಸಿದರೆ ಉತ್ತಮ. ಆದರೆ 1 ಗ್ಲಾಸ್ ಹಾಲಿಗೆ ಸಕ್ಕರೆ ಬೆರೆಸಿ ಕುಡಿದರೆ ಯಶಸ್ಸು ನಿಮ್ಮದಾಗುತ್ತದೆ.
* ಶನಿವಾರ ಪ್ರಯಾಣ ಬೆಳೆಸುವುದು ಉತ್ತಮವಲ್ಲ.