ಎಲ್ಲಾ ಪೂಜೆ ಪುನಸ್ಕಾರಗಳಿಗೂ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ ಯಾಕೆ ಗೊತ್ತಾ?

ಬುಧವಾರ, 15 ಆಗಸ್ಟ್ 2018 (08:52 IST)
ಬೆಂಗಳೂರು : ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯು ಸನಾತನವಾಗಿದ್ದು,  ನಮ್ಮ ಈ ಹಿಂದೂ ಸಂಸ್ಕೃತಿಯಲ್ಲಿ  ತೆಂಗಿನ ಕಾಯಿಗೆ ವಿಶೇಷವಾದ  ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿ ಅಥವಾ ಶ್ರೀಫಲವನ್ನು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲೇ ದೇವರಿಗೆ ಅರ್ಪಿಸುವುದಕ್ಕೆ ಮಹತ್ವದ ಕಾರಣವಿದೆ.


ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವವರೆಗೂ ಅಂದರೆ ಅದನ್ನು ಒಡೆಯುವವರೆಗೂ ತೆಂಗಿನ ಕಾಯಿಯ ಒಳಗಿರುವ ಭಾಗವನ್ನು ಯಾರು  ಸೇವಿಸಲು  ಸಾಧ್ಯವಿರುವುದಿಲ್ಲ. ಒಮ್ಮೆ ತೆಂಗಿನ ಕಾಯಿಯನ್ನು ಒಡೆದರೆ ಅದರಲ್ಲಿರುವ ನೀರು ಹಾಗೂ ಒಳಭಾಗದಲ್ಲಿರುವ ಪದಾರ್ಥ ದೇವರಿಗೆ ನೈವೇದ್ಯವಾಗಲಿದೆ.


ತೆಂಗಿನ ಕಾಯಿಯ ಮೇಲ್ಭಾಗದಲ್ಲಿರುವ ಕರಟ ಮನುಷ್ಯನ ಅಹಂಕಾರವನ್ನು ಪ್ರತಿನಿಧಿಸುತ್ತದೆ. ಒಳಗಿರುವ ಸಿಹಿ ನೀರು ಹಾಗೂ ಸೇವಿಸಬಹುದಾದ ಪದಾರ್ಥ ಸಾತ್ವಿಕತೆ, ಮೃದುತ್ವವನ್ನು ಪ್ರತಿನಿಧಿಸುತ್ತದೆ. ಅಹಂಕಾರವನ್ನು ಪ್ರತಿನಿಧಿಸುವ ಕರಟವನ್ನು ಒಡೆದು ಒಳಗಿರುವ ಸಾತ್ವಿಕತೆಯಿಂದ ದೇವರನ್ನು ಪ್ರಾರ್ಥಿಸಿದರೆ ಅಂತರಾತ್ಮ ಶುದ್ಧಿಗೆ ಸಹಕಾರಿಯಾಗಲಿದೆ ಎಂಬ ನಂಬಿಕೆಯೂ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ