ಮೃಗಶಿರ ಕಾರ್ತೆ ದಿನ ಮೀನನ್ನು ಹೆಚ್ಚಾಗಿ ತಿನ್ನಲು ಹಿರಿಯರು ಹೇಳುಲು ಕಾರಣವೇನು ಗೊತ್ತಾ?

ಭಾನುವಾರ, 13 ಮೇ 2018 (06:57 IST)
ಬೆಂಗಳೂರು : ಮೃಗಶಿರ ಪ್ರಾರಂಭದಲ್ಲಿ ಯಾರೇ ಆಗಲಿ ಮೀನನ್ನು ಹೆಚ್ಚಾಗಿ ತಿನ್ನುತ್ತಾರೆ. ಇದನ್ನು ನಮ್ಮ ಪೂರ್ವಿಕರಿಂದ ಅದೆಷ್ಟೋ ಮಂದಿ ಪಾಲಿಸುತ್ತಾ ಬಂದಿದ್ದಾರೆ. ಎಲ್ಲರೂ ಇದೇ ಪದ್ಧತಿಯನ್ನು ಫಾಲೋ ಆಗುತ್ತಿದ್ದಾರೆ. ಮೃಗಶಿರ ಬಂತೆಂದರೆ ಸಾಕು, ಮೀನನ್ನು ತಂದು ಬಿಸಿಬಿಸಿಯಾಗಿ ಅಡುಗೆ ಮಾಡಿಕೊಂಡು ತಿನ್ನುವುದು ಸಾಮಾನ್ಯ. ಇಷ್ಟಕ್ಕೂ ಮೃಗಶಿರ ಕಾರ್ತೆ ದಿನ ಮೀನನ್ನು ಯಾಕೆ ತಿನ್ನುತ್ತಾರೆ ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಮೃಗಶಿರ ಕಾರ್ತೆ ಬರುತ್ತಿದ್ದಂತೆ ಒಮ್ಮೆಲೆ ವಾತಾವರಣ ತಣ್ಣಗಾಗುತ್ತದೆ. ಅಲ್ಲಿಯವರೆಗೂ ಇದ್ದ ಬಿಸಿ ವಾತಾವಾಣ ಕೂಡಲೆ ಹೋಗುತ್ತದೆ. ಇದರಿಂದ ಒಮ್ಮೆಲೆ ಬರುವ ತಣ್ಣಗಿನ ವಾತಾವರಣದಿಂದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಈ ಕ್ರಮದಲ್ಲಿ ಮೈಯಲ್ಲಿ ಬಿಸಿ ಇರಲು ಮೀನನ್ನು ತಿನ್ನುತ್ತಾರೆ. ಆ ರೀತಿ ಮಾಡುವುದರಿಂದ ದೇಹದ ಉಷ್ಣೋಗ್ರತೆ ನಿಯಂತ್ರಣದಲ್ಲಿರುತ್ತದೆ. ಇದರಿಂದ ಜ್ವರ, ಇತರ ಅನಾರೋಗ್ಯಗಳು ಬರಲ್ಲ. ಹಾಗಾಗಿ ಮೃಗಶಿರ ಬರುತ್ತಿದ್ದಂತೆ ಮೀನನ್ನು ತಿನ್ನುತ್ತಾರೆ.
 

ಮೃಗಶಿರದಿಂದ ಉಂಟಾಗುವ ತಣ್ಣಗಿನ ವಾತಾವರಣದಲ್ಲಿ ಶ್ವಾಶಕೋಶ ಸಮಸ್ಯೆಗಳಿರುವರಿಗೆ ಸೈನಸ್, ಅಸ್ತಮಾದಂತಹ ರೋಗಗಳು ಕೂಡಲೆ ಅಟ್ಯಾಕ್ ಆಗುತ್ತವೆ. ಇದರಿಂದ ಅವರು ಮೀನನ್ನು ಇಂಗು ಹಾಕಿ ಬೇಯಿಸಿಕೊಂಡು ತಿನ್ನುತ್ತಾರೆ. ಆ ರೀತಿ ತಿನ್ನುವುದರಿಂದ ಆ ರೋಗಗಳಿಂದ ಸುರಕ್ಷಿತವಾಗಿರಬಹುದು. ಅವುಗಳಿಂದ ಯಾವುದೇ ತೊಂದರೆ ಆಗಲ್ಲ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ