ಮನೆಯ ಈ ದಿಕ್ಕಿನಲ್ಲಿ ಮರವಿದ್ದರೆ ಯಜಮಾನನಿಗೆ ಆಪತ್ತು ಖಂಡಿತ

ಗುರುವಾರ, 28 ಫೆಬ್ರವರಿ 2019 (07:11 IST)
ಬೆಂಗಳೂರು : ಮನೆಯಿದ್ದ ಕಡೆ ಮರಗಳನ್ನು ಬೆಳೆಸುತ್ತಾರೆ. ಆದರೆ ಮನೆಯ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಬೆಳೆಸಬಾರದಂತೆ.


ಹೌದು. ಯಾವುದೇ ಒಬ್ಬ ವ್ಯಕ್ತಿ ತನ್ನ ಗುರಿ ಮುಟ್ಟಲು ಹೊರಟಾಗ ಆತನ ಎದುರು ಅವನಿಗಿಂತ ಎತ್ತರವಾದ ವಸ್ತು ಬಂದರೆ ಆತನಿಗೆ ಮುಂದೆ ಹೋಗಲು ಅದು ತಡೆಯಾಗುತ್ತದೆ.


ಅದೇರೀತಿ ಮನೆಯ ಪೂರ್ವದಿಕ್ಕಿನಲ್ಲಿ ಮರಗಳನ್ನು ಬೆಳೆಸಬಾರದಂತೆ. ಅಲ್ಲದೇ ಆ ಮರ ಮನೆಕ್ಕಿಂತ ಎತ್ತರಕ್ಕೆ ಬೆಳೆಯಬಾರದು. ಇದರಿಂದ ಮನೆಯ ಯಜಮಾನನ ಬಲ ದುರ್ಬಲವಾಗುತ್ತದೆಯಂತೆ. ಆತ ಅಭಿವೃದ್ಧಿ ಹೊಂದುವುದಿಲ್ಲವಂತೆ.


ಒಂದು ವೇಳೆ ಮರವಿದ್ದರೆ ಅಂತವರು ಆಚಾರ್ಯರ ಮುಖಾಂತರ ವೃಕ್ಷ ಚೇಧನ ಹೋಮ ಮಾಡಿಸಿ 7 ತಲೆಮಾರಿನವರಿಗೆ ಈ ದೋಷ ತಗಲದಂತೆ ಒಂದೊಂದು ತಲೆ ಮಾರಿಗೂ 4 ವೃಕ್ಷ ಬೆಳೆಸಿ ದೇವಾಲಯಕ್ಕೆ ಕೊಡಬೇಕು. ಹೀಗೆ ಮಾಡಿದರೆ ಈ ದೋಷ ನಿವಾರಣೆಯಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ