ನೀರಿನಿಂದಲೂ ಕೂಡ ಹಣದ ಸಮಸ್ಯೆ ನಿವಾರಿಸಿಕೊಳ್ಳಬಹುದು. ಅದು ಹೇಗೆ ಗೊತ್ತಾ?

ಭಾನುವಾರ, 18 ಆಗಸ್ಟ್ 2019 (09:39 IST)
ಬೆಂಗಳೂರು : ಜೀವನದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಅದು ಹಣದ  ಸಮಸ್ಯೆ. ಈ ಹಣಕಾಸಿನ ಸಮಸ್ಯೆ ನಿಮಗೆ ಪದೇ ಪದೇ ಕಾಡುತ್ತಿದ್ದರೆ ಆ ದೋಷ ನಿವಾರಿಸಿಕೊಳ್ಳಕೊಳ್ಳಲು ಅನೇಕ ಪರಿಹಾರಗಳಿರುತ್ತವೆ. ಅಂದಹಾಗೇ ನೀರಿನಿಂದಲೂ ಕೂಡ ಈ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ದೇವರ ಮನೆಯಲ್ಲಿ ಒಂದು ತಾಮ್ರದ ಚೊಂಬಿನ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಾ ಇರಿ. ಹಾಗೆಯೇ ನಾವು ನೀರನ್ನು ಕುಡಿಯುವಾಗ ಪೂರ್ತಿಯಾಗಿ ಕುಡಿಯದೆ ಸ್ವಲ್ಪ ನೀರನ್ನು ಉಳಿಸುವುದರಿಂದ ಲಕ್ಷ್ಮೀ ದೇವಿಯು ಆಗ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.ಯಾವುದೇ ಕಾರಣಕ್ಕೂ ನೀರು ತುಂಬಿರುವ ಯಾವುದೇ ಪಾತ್ರೆ, ಬಕೆಟ್, ಆಥವಾ ಕೊಡವನ್ನು ನಿಮ್ಮ ಖಾಲಿನಿಂದ ಒದೆಯಬೇಡಿ ಇದರಿದ ದಟ್ಟ ದಾರಿದ್ರ್ಯ ಕಾಡುತ್ತದೆ.


ಮನೆಯ ದಕ್ಷಿಣ ದಿಕ್ಕಿಗೆ ಒಂದು ಚೊಂಬು ನೀರಿನಲ್ಲಿ ಅರಿಶಿನ ಬೆರೆಸಿ ಇಟ್ಟು ಅದ್ರಲ್ಲಿ ತಾಮ್ರದ ಆಮೆಯ ಮೂರ್ತಿಯನ್ನು ಮುಳುಗಿಸಿ ಇಡಬೇಕು ಹೀಗೆ ಒಂದು ದಿನಾ ಪೂರಾ ಇಟ್ಟು ಮಾರನೇ ದಿನಾ ಬೆಳಗ್ಗೆ ಆ ನೀರನ್ನು ತುಳಸಿ ಗಿಡಕ್ಕೆ ಹಾಕಿ ಆಮೆಯ ಮೂರ್ತಿಯನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಸಕಲ ದರಿದ್ರಗಳು ದೂರವಾಗುತ್ತವೆ .


ಆಡುಗೆ ಮನೆಯಲ್ಲಿ, ಹಾಗೂ ಸ್ನಾನದ ಕೊಠಡಿಯಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ