ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದರೆ ಇದೊಂದು ವಸ್ತುವನ್ನು ಗಣೇಶನಿಗೆ ಅರ್ಪಿಸಿ

Krishnaveni K

ಬುಧವಾರ, 23 ಅಕ್ಟೋಬರ್ 2024 (08:40 IST)
ಬೆಂಗಳೂರು: ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ, ಏಕಾಗ್ರತೆಯ ಕೊರತೆ, ಹಠವಾದಿ ಗುಣವಿದ್ದರೆ ಗಣೇಶನನ್ನು ಕುರಿತು ಪೂಜೆ ಮಾಡಿದರೆ ಆತ ಬೇಡಿದ ವರವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ.

ಕೆಲವರಿಗೆ ವಿದ್ಯಾರೇಖೆ ದೃಢವಾಗಿರುತ್ತದೆ. ಆದರೆ ಕೆಲವರಿಗೆ ವಿದ್ಯೆ ಬೇಗನೇ ತಲೆಗೆ ಹತ್ತುವುದಿಲ್ಲ. ಶಾಲೆಗೆ ಹೋಗಲು ಮಕ್ಕಳು ಹಠ ಮಾಡುತ್ತಾರೆ. ಓದಿನಲ್ಲಿ ಏಕಾಗ್ರತೆ ವಹಿಸುವುದಿಲ್ಲ. ಇದು ಪೋಷಕರ ಪಾಲಿಗೆ ಚಿಂತೆಯ ವಿಷಯವಾಗುತ್ತದೆ. ಮಕ್ಕಳಿಗೆ ವಿದ್ಯೆ ತಲೆಗೆ ಹತ್ತಲು ಗಣಪತಿಯ ಆರಾಧನೆ ಮಾಡುವುದು ಮುಖ್ಯ.

ಪ್ರತಿನಿತ್ಯ ಮಕ್ಕಳಲ್ಲಿ ಗಣೇಶ ಸ್ತುತಿಯನ್ನು ಹೇಳಿಸಿ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ

ಎಂಬ ಮಂತ್ರವನ್ನು ಮಕ್ಕಳು ಪ್ರತಿನಿತ್ಯ ಹೇಳಲಿ. ಅದೇ ರೀತಿ ಮಕ್ಕಳಲ್ಲಿ ಬಾಲಾರಿಷ್ಠವಿದ್ದರೆ, ವಿದ್ಯಾಭ್ಯಾಸಕ್ಕೆ ತೊಡಕುಗಳಿದ್ದರೆ ಪ್ರತಿ ಬುಧವಾರಗಳಂದು ಗಣೇಶನಿಗೆ ಗರಿಕೆಯ ಹಲ್ಲು ಅರ್ಪಿಸಿ ಪೂಜೆ, ಹವನ ಮಾಡಿದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ. ದೂರ್ವ ಎಂದರೆ ಗರಿಕೆಯಾಗಿದ್ದು ದೂರ್ವ ಹವನ ಮಾಡುವುದರಿಂದ ಮಕ್ಕಳಿಗೆ ಆಯುಷ್ಯ, ಆರೋಗ್ಯ ಜೊತೆಗೆ ವಿದ್ಯಾಭ್ಯಾಸದಲ್ಲೂ ಯಶಸ್ಸು ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ