ಏಲಕ್ಕಿಯಿಂದ ಹೀಗೆ ದೋಷ ನಿವಾರಿಸಿಕೊಳ್ಳಿ

ಶನಿವಾರ, 17 ಆಗಸ್ಟ್ 2019 (06:54 IST)
ಬೆಂಗಳೂರು : ಏಲಕ್ಕಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದು ಆರೋಗ್ಯಕ್ಕೆ ಉತ್ತಮವಾಗಿರುವುದು ಮಾತ್ರ ಇದರಿಂದ ಕೆಲವು ದೋಷ ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಂತೆ.
ನೀವು ತುಂಬಾ ಶ್ರಮ ಪಟ್ಟರೂ ಸಹ ನಿಮಗೆ ಉತ್ತಮವಾದ ಕೆಲಸ ಮತ್ತು ಉದ್ಯೋಗದಲ್ಲಿ ಬಡ್ತಿ ಮತ್ತು ಧನ ಪ್ರಾಪ್ತಿಯಾಗುತ್ತಿಲ್ಲ ಎಂದರೆ, ಇಂದಿನಿಂದ ಪ್ರತಿದಿನ ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಒಂದು ಏಲಕ್ಕಿಯನ್ನು ಕಟ್ಟಿ ಇಟ್ಟುಕೊಂಡು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಮತ್ತು ಬೆಳಗ್ಗೆ ಅದನ್ನು ಯಾವುದಾದರೂ ಬಡವರಿಗೆ ಅಥವಾ ಹೊರಗಡೆ ವ್ಯಕ್ತಿಗಳಿಗೆ ದಾನ ಮಾಡಬೇಕು.


ನೀವು ಸುಂದರವಾದ ಪತ್ನಿಯನ್ನು ಪಡೆಯಬೇಕು ಎಂದಿದ್ದರೆ, ಪ್ರತಿ ಗುರುವಾರ 5 ಏಲಕ್ಕಿಯನ್ನು ಮತ್ತು ಹಳದಿ ಬಣ್ಣದ ವಸ್ತ್ರದ ಜೊತೆಗೆ ಯಾವುದಾದರೂ ವ್ಯಕ್ತಿಗೆ ದಾನ ಮಾಡಿ. ಈ ಉಪಾಯವನ್ನು ನೀವು ಐದು ಗುರುವಾರದ ದಿನ ಮಾಡಬೇಕು.
ನಿಮ್ಮ ಜಾತಕದಲ್ಲಿ ಶುಕ್ರ ನೀಚ ಸ್ಥಾನದಲ್ಲಿದ್ದರೆ ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಒಂದು ಲೋಟ ನೀರನ್ನು ತೆಗೆದುಕೊಂಡು 2 ಏಲಕ್ಕಿಯನ್ನು ಅದರೊಳಗೆ ಹಾಕಿ, ಅರ್ಧ ಲೋಟ ನೀರು ಆಗುವವರೆಗೆ ಅದನ್ನು ಚೆನ್ನಾಗಿ ಆ ನೀರನ್ನು ಕುದಿಸಿ, ನಂತರ ಆ ನೀರನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಹಾಕಿಕೊಂಡು ಸ್ನಾನ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ