ಇವತ್ತು ಶನಿ ಜಯಂತಿ: ಯಾವ್ಯಾವ ರಾಶಿಗೆ ಯಾವ ಪರಿಹಾರ..? ಇಲ್ಲಿದೆ ಟಿಪ್ಸ್

ಗುರುವಾರ, 25 ಮೇ 2017 (17:44 IST)
ಇವತ್ತು ಶನಿ ಜಯಂತಿ.. ವೈಶಾಖ ವೈದ್ಯ ಚತುರ್ಧಶಿ ಅಮಾವಾಸ್ಯೆ. ಇಂದಿನ ದಿನವನ್ನ ಶನಿ ಹುಟ್ಟಿದ ದಿನವೆಂದು ಹೇಳಲಾಗುತ್ತೆ. ಶನಿ ಪ್ರವೇಶವಾಗಿ ಸಾಡೇ ಸಾತಿಗೆ ಒಳಗಾಗಿರುವವರು ಸಮಸ್ಯೆಗಳಿಂದ ಹೊರಬರಲು ಕೆಲ ಪರಿಹಾರೋಪಾಯಗಳನ್ನ ಮಾಡಲು ಸೂಚಿಸಲಾಗುತ್ತೆ. ಧನು, ಮಕರ ಮತ್ತು ವೃಶ್ಚಿಕ ರಾಶಿಗಳಿಗೆ ಸಾಡೇ ಸಾತಿ ಇದೆ ಎನ್ನಲಾಗಿದೆ.

ಹಾಗಾದರೆ ಶನಿ ಪ್ರಭಾವದಿಂದ ಪಾರಾಗಲು ಯಾವ್ಯಾವ ರಾಶಿಯವರು ಏನು ಮಾಡಬೇಕೆಂಬುದರ ದ್ವಾದಶ ರಾಶಿಗಳ ಸರಳ ಮಾರ್ಗೋಪಾಯಗಳು ಇಲ್ಲಿವೆ.
 

1.ಮೇಷ ರಾಶಿ: ಹನುಮಾನ್ ಚಾಲಿಸಾವನ್ನ ಪಠಣ ಮಾಡಿ

2.ವೃಷಭ ರಾಶಿ: ಶನಿ ಅಷ್ಟೋತ್ತರ ಶತನಾಮಾವಳಿ ಪಠಣ ಮಾಡಿ

3.ಮಿಥುನ ರಾಶಿ:: ಕಪ್ಪು ಉದ್ದಿನಬೇಳೆಯನ್ನ ಶನಿ ಜಯಂತಿಯಂದು ಶನಿಮಹಾತ್ಮನಿಗೆ ಅರ್ಪಿಸಿ

4.ತುಲಾ ರಾಶಿ: ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿ.

5.ವೃಶ್ಚಿಕ ರಾಶಿ: ಗೋಧಿಯನ್ನ ಕಪ್ಪು ಇರುವೆಗಳಿಗೆ ಹಾಕಿ’

6.ಧನು ರಾಶಿ: ಅಶ್ವತ್ಥ ಮರದ ಕೆಳಗೆ 11 ದೀಪಗಳನ್ನ ಹಚ್ಚಿ

7.ಕಟಕ ರಾಶಿ: ರಾಜ ದಶರಥ ಶನಿ ಸ್ತೋತ್ರ ಪಠಣ ಮಾಡಿ

8.ಸಿಂಹ ರಾಶಿ: ಹನುಮಂತನಿಗೆ ಕಡಳೆ ಕಾಳು ಅಥವಾ ವಸ್ತ್ರವನ್ನ ಮಂಗಳವಾರದಂದು ಅರ್ಪಿಸಿ.

9. ಕನ್ಯಾ ರಾಶಿ: ಶನಿ ಬೀಜಮಂತ್ರ ಪಠಿಸಿ

10. ಮಕರ ರಾಶಿ: ವೇದದ ಮಂತ್ರ ಜಪ ಮಾಡಿ ಅಥವಾ ಓ ನಮೋ ಶನೈಶ್ಚರಾಯ ನಮಃ ಮಂತ್ರ 108 ಜಪ ಮಾಡಿ.

11.ಕುಂಭ ರಾಶಿ: ನೀಲಿ ಬಣ್ಣದ ಉಡುಪು ಧರಿಸಿ,ಜ್ಯೋತಿಷಿಗಳನ್ನ ಭೇಟಿ ಮಾಡಿ ಸಾಡೇಸಾತಿಗೆ ಪರಿಹಾರ ಕಂಡುಕೊಳ್ಳಿ.

12. ಮೀನ ರಾಶಿ: ಕುಷ್ಠರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ಕೊಡಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ