Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ

Krishnaveni K

ಸೋಮವಾರ, 25 ನವೆಂಬರ್ 2024 (08:59 IST)
ಬೆಂಗಳೂರು: ಸಿಂಹ ರಾಶಿಯವರಿಗೆ 2025 ರಲ್ಲಿ ಶಾಂತಿಯುತವಾದ ಕೌಟುಂಬಿಕ ಜೀವನವಿರಲಿದೆ. ಜೊತೆಗೆ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗುವ ಸಂತೋಷದ ಸಮಯವಾಗಿರಲಿದೆ.

2025 ಸಿಂಹ ರಾಶಿಯವರಿಗೆ ಕೌಟುಂಬಿಕವಾಗಿ ಉತ್ತಮ ವರ್ಷವಾಗಿರಲಿದೆ. ಕುಟುಂಬ ಸದಸ್ಯರ ಪರಸ್ಪರ ಸಹಕಾರ ಮತ್ತು ಪ್ರೀತಿ ಬಾಂಧವ್ಯವಿರಲಿದೆ. ನಿಮ್ಮ ಕೌಟುಂಬಿಕ ಬಂಧ ಇನ್ನಷ್ಟು ಗಟ್ಟಿಯಾಗುವುದು. ಅವಿವಾಹಿತರಿಗೆ ವಿವಾಹ ಯೋಗವಿದೆ.

ಯಾವುದೇ ಕಷ್ಟ ಬಂದರೂ ಕುಟುಂಬ ಸದಸ್ಯರು ನಿಮ್ಮ ಜೊತೆಗೆ ನಿಲ್ಲುವರು. ಸಂತಾನಾಪೇಕ್ಷಿತ ದಂಪತಿಗಳು ಶುಭ ಸೂಚನೆ ಪಡೆಯಲಿದ್ದಾರೆ. ಕುಟುಂಬ ಸದಸ್ಯರೊಂಗೆ ಪ್ರವಾಸ, ಮೋಜಿನ ಸಮಯಗಳನ್ನು ಕಳೆಯುವ ಯೋಗವಿದೆ.

ಏಪ್ರಿಲ್ ಬಳಿಕ ಕೌಟುಂಬಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪರಿಹಾರವಾಗಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ನಡೆಯಲಿದ್ದು, ವರ್ಷಾಂತ್ಯದಲ್ಲಿ ಕುಟುಂಬ ಸದಸ್ಯರೊಂದಿಗೆ ವಿನೋದದ ಕಾಲ ಕಳೆಯಲಿದ್ದೀರಿ. ಆದರೆ ನಿಮ್ಮ ಪೋಷಕರ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ನಿಮ್ಮ ಸಂಗಾತಿಗೂ ಅಮೂಲ್ಯ ಸಮಯ ಮೀಸಲಿಡಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ