ಬೆಂಗಳೂರು: ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೆ ಅದೃಷ್ಟ ಸಂಖ್ಯೆಯನ್ನು ನೋಡಿಕೊಳ್ಳುತ್ತೇವೆ. ಹಾಗಿದ್ದರೆ ನಿಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ ನೋಡಿ.
ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ, ಯಾವುದೇ ಖರೀದಿ ಮಾಡುವ ಮುನ್ನ ಅದೃಷ್ಟ ಸಂಖ್ಯೆಗೆ ಅನುಗುಣವಾಗಿ ಮಾಡಿಕೊಳ್ಳುತ್ತೇವೆ. ಅದೃಷ್ಟ ಸಂಖ್ಯೆಯಿಂದ ನಮಗೆ ಎಲ್ಲವೂ ಶುಭವೇ ಆಗುತ್ತದೆ ಎಂದು ನಂಬಿಕೆಯಿದೆ. ಹಾಗಿದ್ದರೆ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ
ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆಯನ್ನು ಕಂಡು ಹಿಡಿಯುವುದು ತುಂಬಾ ಸುಲಭ. ನಿಮ್ಮ ಹುಟ್ಟಿದ ದಿನಾಂಕವನ್ನು ಕೂಡಿಸಿದಾಗ ಸಿಂಗಲ್ ಡಿಜಿಟ್ ಬರಬೇಕು. ಅದೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ.
ಉದಾಹರಣೆಗೆ ನಿಮ್ಮ ಹುಟ್ಟಿದ ದಿನಾಂಕ 16 ಆಗಿದ್ದರೆ, 1 + 6 ಎಂದು ಕೂಡಿಸಬೇಕು. ಈಗ ಇದಕ್ಕೆ ಸಿಗುವ ಉತ್ತರ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ. ಅಂದರೆ 7 ಅದೃಷ್ಟ ಸಂಖ್ಯೆಯಾಗಿರುತ್ತದೆ. ಒಂದು ವೇಳೆ ನಿಮ್ಮ ಹುಟ್ಟಿದ ದಿನಾಂಕವನ್ನು ಕೂಡಿಸಿದಾಗ ಎರಡು ಸಂಖ್ಯೆ ಬಂದರೆ ಏನು ಮಾಡಬೇಕು ಎಂಬ ಅನುಮಾನ ನಿಮಗೆ ಬರಬಹುದು.
ಇಂತಹ ಸಂದರ್ಭದಲ್ಲಿ ಸಿಂಗಲ್ ಡಿಜಿಟ್ ಬರುವವರೆಗೂ ಕೂಡಿಸುತ್ತಿರಬೇಕು. ಉದಾಹರಣೆಗೆ ನಿಮ್ಮ ಹುಟ್ಟಿದ ದಿನಾಂಕ 29 ಆಗಿದ್ದರೆ 2+9=11 ಆಗುತ್ತದೆ. ಆಗ ಮತ್ತೆ 11 ನ್ನು 1+1 ಎಂದು ಕೂಡಿಸಬೇಕು. ಈಗ 2 ಉತ್ತರ ಬರುತ್ತದೆ. ಇದುವೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ. ಒಂದು ವೇಳೆ ಸಿಂಗಲ್ ಡಿಜಿಟ್ ನಿಮ್ಮ ಹುಟ್ಟಿದ ದಿನಾಂಕವಾಗಿದ್ದರೆ ಆ ದಿನಾಂಕ ಪ್ಲಸ್ ಶೂನ್ಯ ಎಂದು ಮಾಡಿ ಅದುವೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ.