ಅಡುಗೆಗೆ ಬಳಸುವ ಈ ವಸ್ತುವು ಮನೆಯಿಂದ ಕಳುವಾದರೆ ದರಿದ್ರ ತಪ್ಪಿದ್ದಲ್ಲ

ಮಂಗಳವಾರ, 16 ಅಕ್ಟೋಬರ್ 2018 (11:17 IST)
ಬೆಂಗಳೂರು : ನಮ್ಮ ಹಿಂದೂ ಧರ್ಮದ ಪ್ರಕಾರ ಅಥವಾ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುಗಳಿಗೆ ಅದರದೇ ಆದ ಸ್ಥಳಗಳನ್ನು ನಿಗದಿ ಪಡಿಸಲಾಗಿದೆಯಂತೆ ಅದರ ಪ್ರಕಾರ ವಸ್ತುಗಳನ್ನು ಇಟ್ಟರೆ ಆ ಮನೆಗೆ ಶ್ರೇಯಸ್ಸಂತೆ.


ವಾಸ್ತುಶಾಸ್ತ್ರದ ಪ್ರಕಾರ ಮುಖ್ಯಾವಾಗಿ ಅಡುಗೆ ಮನೆ ಅಗ್ನಿ ಸ್ಥಾನದ ಆಗ್ನೇಯ ಭಾಗದಲ್ಲಿ ಇರಬೇಕು ಹಾಗೂ ಮತ್ತು ಒಲೆಯನ್ನ ಮನೆಗೆ ಬಂದ ಇತರರಿಗೆ ಕಾಣದಂತೆ ಇಡಬೇಕು. ಅಗ್ನಿ ಮತ್ತು ನೀರು ಎರಡು ಪರಸ್ಪರ ವಿರುದ್ಧ ಪದಾರ್ಥಗಳು. ಆದ್ದರಿಂದ ಅಡುಗೆ ಮನೆಯಲ್ಲಿ ಅಗ್ನಿ ಹಾಗು ನೀರಿಗೆ ಸಂಬಂಧ ಪಟ್ಟ ವಸ್ತುವನ್ನ ಆದಷ್ಟು ದೂರ ವಿಟ್ಟರೆ ಒಳ್ಳೆಯದು.


ಉಪ್ಪು ಹಾಗು ಅರಿಶಿನ ಅಡುಗೆಗೆ ಬಳಸುವ ಪ್ರದಾನ ವಸ್ತುಗಳು, ಯಾವುದೇ ಆಹಾರ ತಯಾರಿಸಲು ಉಪ್ಪು ಹಾಗು ಅರಿಶಿನ ಅಗತ್ಯ ಹೆಚ್ಚು, ಉಪ್ಪು ಆಹಾರಕ್ಕೆ ರುಚಿಯನ್ನ ಕೊಟ್ಟರೆ ಅರಿಶಿನ ಆಹಾರಕ್ಕೆ ಬಣ್ಣ ಮತ್ತು ಔಷದಿಯ ಗುಣವನ್ನು ನೀಡಿ ಆರೋಗ್ಯವನ್ನ ನೀಡುತ್ತದೆ. ಈ ಉಪ್ಪು ಮತ್ತು ಅರಿಶಿಣವನ್ನ ಒಂದೇ ಕಡೆ ಭದ್ರಪಡಿಸಿ ಇಡಬಾರದು ಹೀಗೆ ಇಟ್ಟರೆ ದರಿದ್ರ ನಿಮ್ಮನ್ನ ಹುಡುಕಿ ಕೊಂಡು ಬರುತ್ತದೆ ಯಂತೆ, ಹಾಗು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಕಾಣಿಕೊಳ್ಳುತ್ತದೆಯಂತೆ. ಹಾಗೇ ಮನೆಯಲ್ಲಿ ಉಪ್ಪು ಕಳ್ಳತನ ವಾದರೆ ಮನೆಯಿಂದ ಲಕ್ಷ್ಮಿ ಹೊರಹೋದಂತೆ ಎಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ