ಈ ದೇವಸ್ಥಾನದಲ್ಲಿ ಕುಡಗೋಲನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾರಂತೆ. ಯಾಕೆ ಗೊತ್ತಾ?
ಮಂಗಳವಾರ, 14 ಮೇ 2019 (07:18 IST)
ಬೆಂಗಳೂರು : ಎಲ್ಲಾ ದೇವಸ್ಥಾನಗಳಲ್ಲಿ ಹೆಚ್ಚಾಗಿ ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸಿದರೆ ಈ ದೇವಾಲಯದಲ್ಲಿ ಮಾತ್ರ ಕುಡಗೋಲನ್ನು ಅರ್ಪಿಸುತ್ತಾರಂತೆ.
ಹೌದು. ಉತ್ತರಾಖಂಡ್ ನ ಫತೇಪುರದಲ್ಲಿ ದಟ್ಟ ಕಾಡಿನ ನಡುವೆ ಇರುವ ಗೋಪಾಲ್ ಬಿಶ್ತ್ ದೇವಾಲಯದಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವರಿಗೆ ಭಕ್ತಾದಿಗಳು ಕುಡಗೋಲನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾರಂತೆ. ಈ ದೇವಾಲಯದ ಬಗ್ಗೆ ಸ್ಥಳೀಯರಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿ ಇದೆ. ಭಕ್ತಾದಿಗಳು ಏನೇ ಕೋರಿದರೂ ಈ ದೇವರು ಅದನ್ನು ಈಡೇರಿಸುತ್ತಾನೆ ಎಂದು ಹೇಳುತ್ತಾರೆ.
ದನ ಸಾಕುವವರು ಹಾಗೂ ಕೃಷಿ ಭೂಮಿಯನ್ನು ಹೊಂದಿದ್ದವರು ಇಲ್ಲಿಗೆ ಬಂದು ತಮ್ಮ ಜಾನುವಾರು ಹಾಗೂ ಕೃಷಿ ಭೂಮಿಯನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಕುಡಗೋಲು ಅರ್ಪಿಸುತ್ತಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.