ಶ್ರಾವಣ ಮಾಸದಲ್ಲಿ ಯಾವ ವಾರ ಯಾವ ನೈವೇದ್ಯ ಸಮರ್ಪಿಸಿದರೆ ಉತ್ತಮ

ಬುಧವಾರ, 5 ಆಗಸ್ಟ್ 2020 (07:37 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ದೇವರ ಪೂಜೆ ಮಾಡುತ್ತೇವೆ. ಆ ವೇಳೆ ದೇವರಿಗೆ ಈ ನೈವೇದ್ಯಗಳನ್ನು ಇಟ್ಟರೆ ತಾಯಿ ಆಶೀರ್ವಾದ ದೊರೆಯುತ್ತದೆ.

ಮಂಗಳವಾರದಂದು ದೇವರ ಪೂಜೆ ಮಾಡಿದ ಬಳಿಕ ಕಡಲೆಕಾಳಿನಿಂದ ಮಾಡಿದ ನೈವೇದ್ಯವನ್ನು ದೇವರಿಗೆ ಸಮರ್ಪಿಸಬೇಕು. ಬುಧವಾರದಂದು ಹಾಲಿನಿಂದ ಮಾಡಿದ ಪಾಯಸವನ್ನು ಸಮರ್ಪಿಸಬೇಕು.  ಗುರುವಾರದ ದಿನ ಎಳ್ಳಿನ ಉಂಡೆಯನ್ನು ಸಮರ್ಪಿಸಬೇಕು. ಶುಕ್ರವಾರದಂದು ಸಜ್ಜಿಗೆಯನ್ನು ಸಮರ್ಪಿಸಬೇಕು. ಶನಿವಾರದಂದು ಕಜ್ಜಾಯವನ್ನು ಸಮರ್ಪಿಸಬೇಕು.


ಭಾನುವಾರದಂದು ಬಿಸಿಬೇಳೆ ಬಾತ್ ನ್ನು ಸಮರ್ಪಿಸಬೇಕು. ಸೋಮವಾರದಂದು  ಒಬ್ಬಟ್ಟನ್ನು ಮಾಡಿ ಸಮರ್ಪಿಸಿದರೆ ಉತ್ತಮ ಎಂದು ಪಂಡಿತರು ಹೇಳುತ್ತಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ