ಬೆಂಗಳೂರು: ಕಾಳಿ ಎಂದರೇ ಕಪ್ಪು ಬಣ್ಣ ನೆನಪಾಗುತ್ತದೆ. ಕಾಳಿ ದೇವಿ ಅಥವಾ ಕಾಳಿಕಾ ಮಾತೆ ಎಂದು ಕರೆಯಲ್ಪಡುವ ದೇವಿಯ ಒಂದು ಅವತಾರ ಭೀಭತ್ಸ ರೂಪದ್ದಾಗಿದೆ. ಆದರೆ ಆಕೆ ತನ್ನ ಭಕ್ತರ ಪಾಲಿಗೆ ದಯಾಮಯಿ, ಶಕ್ತಿ ತುಂಬುವಾಕೆ.
ಮಾನಸಿಕವಾಗಿ ನಮಗೆ ಭಯ, ದುಷ್ಟ ಶಕ್ತಿಗಳ ಕಾಟವಿದ್ದಾಗ, ಶತ್ರು ಭಯವಿದ್ದಾಗ ಕಾಳಿಕಾ ಮಾತೆಯ ಸ್ತೋತ್ರ ಪಠಿಸುವುದು ಸೂಕ್ತವಾಗಿದೆ. ಸೂರ್ಯಾಸ್ತದ ನಂತರ ಕಾಳಿ ಮಂತ್ರವನ್ನು ಪಠಿಸುವುದು ಸೂಕ್ತವಾಗಿದೆ. ಉತ್ತರಾಭಿಮುಖವಾಗಿ ಕುಳಿತು ಕಾಳಿ ಮಂತ್ರವನ್ನು ಪಠಿಸಬೇಕು.
ಕಾಳಿ ಮಂತ್ರ ಪಠಿಸುವಾಗ ಕೆಂಪು ಬಣ್ಣದ ವಸ್ತ್ರ ಧರಿಸಿದರೆ ದೇವಿ ಪ್ರಸನನ್ನಳಾಗುತ್ತಾಳೆ. ಕಾಳಿ ಮಾತೆಗೆ ಕೆಂಪು ಹೂವುಗಳನ್ನು ಅರ್ಪಿಸಿದರೆ ಶ್ರೇಷ್ಠ. ಸತತವಾಗಿ 40 ದಿನಗಳ ಕಾಲ ಕಾಳಿ ಬೀಜ ಮಂತ್ರವನ್ನು ಪಠಿಸುವುದರಿಂದ ದುಷ್ಠ ಶಕ್ತಿಗಳ ನಾಶವಾಗಿ ನಿಮ್ಮಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ.
ಕಾಳಿ ಬೀಜ ಮಂತ್ರ ಹೀಗಿದೆ: ಓಂ ಕ್ರೀಂ ಕಾಳಿ ಓಂ ಕ್ರೀಂ ಕಾಳಿ
ಇದನ್ನು ಏಕಾಗ್ರತೆಯಿಂದ ಹೇಳುತ್ತಾ ಬಂದರೆ ಒಳಿತಾಗುವುದು.