ವಿಂಡ್ ಚೈಮ್ ಖರೀದಿಸುವಾಗ ಈ ವಿಚಾರದ ಬಗ್ಗೆ ಗಮನವಿರಲಿ

ಶನಿವಾರ, 12 ಡಿಸೆಂಬರ್ 2020 (06:37 IST)
ಬೆಂಗಳೂರು : ಕೆಲವರು ಮನೆಯ ಅಲಂಕಾರಕ್ಕಾಗಿ ವಿಂಡ್ ಚೈಮ್ ನ್ನು ಬಳಸುತ್ತಾರೆ. ಆದರೆ ಇದರ ಜೊತೆಗೆ ಅದರ ಧ್ವನಿ ಬಗ್ಗೆಯೂ ಕೂಡ ಗಮನಕೊಡಬೇಕು. ಯಾಕೆಂದರೆ ಧ್ವನಿ ಮತ್ತು ಅದೃಷ್ಟಕ್ಕೆ ಸಂಬಂಧವಿದೆ. ವಿಂಡ್ ಚೈಮ್  ಸಿಹಿಯಾದ ಶಬ್ದದಿಂದ ಮನೆಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ.

ಹಾಗೇ ವಿಂಡ್ ಚೈಮ್ ಯಾರಿಗಾದರೂ ಉಡುಗೊರೆಯಾಗಿ ನೀಡಲು ಉತ್ತಮ ಆಯ್ಕೆಯಾಗಿದೆ. ನಿಮ್ಮ ಸಂಗಾತಿ, ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬಹುದು. ಇದು ಅವರಿಗೆ ಸಂತೋಷವನ್ನು ನೀಡುತ್ತದೆ. ಹಾಗೇ ಕೆಲವು ವಿಂಡ್ ಚೈಮ್ ಗಳು ನೋಡಲು ಸುಂದರವಾಗಿರುತ್ತವೆ. ಆದರೆ ಅವುಗಳಿಂದ ಬರುವ ಶಬ್ದ ಕಿವಿಗೆ ಕುಟುಕುತ್ತವೆ. ಇದು ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ