ಸಂಜೆ ವೇಳೆ ದೇವರ ಪೂಜೆ ಮಾಡುವಾಗ ಈ ವಿಚಾರ ತಿಳಿದಿರಿ

ಭಾನುವಾರ, 21 ಜುಲೈ 2019 (09:15 IST)
ಬೆಂಗಳೂರು : ಪ್ರತಿ ಮನೆಯಲ್ಲಿಯೂ ಬೆಳಿಗ್ಗೆ ಹಾಗೂ ಸಂಜೆ ದೇವರಿಗೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಆದರೆ ಸಂಜೆ ದೇವರಿಗೆ ಪೂಜೆ ಮಾಡುವಾಗ ಈ ವಿಚಾರಗಳ ಬಗ್ಗೆ ತಿಳಿದಿರಲೇಬೇಕು. ಇಲ್ಲವಾದರೆ ದರಿದ್ರವನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ.




ಸಂಜೆಯ ವೇಳೆ ಸೂರ್ಯಾಸ್ತದ ನಂತರ ಪೂಜೆ ಮಾಡುವವರು ಮನೆಯಲ್ಲಿ ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಆದಕಾರಣ ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭವಾಗುತ್ತದೆ ಎನ್ನಲಾಗಿದೆ. ಹಾಗೇ ಬೆಳಿಗ್ಗೆ ಸೂರ್ಯದೇವನ ಪೂಜೆ ಮಾಡಬಹುದು ಆದರೆ ಸಂಜೆ ಮಾತ್ರ ಯಾವುದೇ ಕಾರಣಕ್ಕೂ ಮಾಡಬಾರದು.
ಸಂಜೆ ವೇಳೆ ಪೂಜೆಗೆ ದರ್ಬೆ, ತುಳಸಿಯನ್ನು ಕಿತ್ತು ದೇವರಿಗೆ ಅರ್ಪಿಸಬಾರದು. ಅಲ್ಲದೇ ರಾತ್ರಿ ಪೂಜೆ ಮಾಡಿದ ನಂತರ ಉಳಿಯುವ ಹೂ, ಅಕ್ಕಿ, ಪೂಜಾ ಸಾಮಗ್ರಿಗಳನ್ನು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದ ತಕ್ಷಣ ಶುದ್ಧವಾಗಿ ನಂತರ ಅವುಗಳನ್ನು ಸ್ವಚ್ಛಗೊಳಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ