ಮದುವೆಯ ಬಗ್ಗೆ ಇಂತಹದೆಲ್ಲಾ ಮೂಢನಂಬಿಕೆಗಳಿವೆಯಂತೆ!

ಶುಕ್ರವಾರ, 22 ಡಿಸೆಂಬರ್ 2017 (15:45 IST)
ಬೆಂಗಳೂರು: ಮದುವೆ ಎಂದರೆ ಚಪ್ಪರ ಹಾಕಿ, ಮಾವಿನ ತೋರಣ ಕಟ್ಟಿ, ಬಾಳೆಎಲೆ ಊಟ ಮಾಡುವುದಲ್ಲ. ಮದುವೆ ಎಂದರೆ ಜೀವನದಲ್ಲಿ ಒಂದೇಸಾರಿ ನಡೆಯುವ ಹಬ್ಬ.ಎರಡು ಮನಸ್ಸುಗಳು ಜೀವನ ಪೂರ್ತಿ ಬೆರೆಯಲು ಹಾಕುವ ಮೊದಲ ಹೆಜ್ಜೆ.


ಮದುವೆ ಬಗ್ಗೆ ಅನೇಕರಿಗೆ ಹಲವಾರು ಮೂಢನಂಬಿಕೆಗಳಿವೆ. ಮದುವೆ ದಿನ ಮಳೆ ಬಂದರೆ ಸಂತಾನೋತ್ಪತ್ತಿಗೆ ಹಾಗು ಸಂಪತ್ತಿಗೆ ಒಂದು ಸೂಚನೆ ಎಂದು ಭಾವಿಸುತ್ತಾರೆ. ಮದುವೆಗೂ ಮುನ್ನ ಹುಡುಗ ಹುಡುಗಿ ಒಬ್ಬರನೊಬ್ಬರು ನೋಡಬಾರದು, ನೋಡಿದರೆ ಅವರ ಮನಸ್ಸು ಬದಲಾಗುತ್ತದೆ ಎಂಬ ನಂಬಿಕೆ ಕೂಡ ಇದೆ.


ಮದುವೆ ದಿನ ಮನೆಯಲ್ಲಿ ಕುದಿಯುತ್ತಿರುವ ಹಾಲು ಹಾಳಾದರೆ ಅದು ಆಶುಭ ಎಂದು ಭಾವಿಸುತ್ತಾರೆ. ಹಾಗಾಗಿ ಹಾಲು ಹಾಳಾಗದಂತೆ ತುಂಬಾ ಎಚ್ಚರ ವಹಿಸುತ್ತಾರೆ. ಹಾಗೆ ವಧು ಮದುವೆ ದಿನ ಅತ್ತರೆ ಅದೃಷ್ಟವೆನ್ನುತ್ತಾರೆ. ಆ ಹುಡುಗಿ ಇನ್ನು ಮುಂದಿನ ಜೀವನದಲ್ಲಿ ಎಂದೂ ಅಳುವ ಸಂದರ್ಭ ಬರುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ