ಹನುಮಾನ್ ದೇವರ ಆರು ಪವರ್ ಫುಲ್ ಪಂತ್ರಗಳು
ಬೆಂಗಳೂರು: ಶನಿವಾರ ಆಂಜನೇಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಈ ಆರು ಪವರ್ ಫುಲ್ ಮಂತ್ರಗಳನ್ನು ಹೇಳಿದರೆ ನಿಮ್ಮ ಕಷ್ಟಗಳು ದೂರವಾಗುವುದು. ಆ ಮಂತ್ರಗಳು ಯಾವುವು ನೋಡಿ.
ಓಂ ಹನುಮತೇ ನಮಃ- ಈ ಮಂತ್ರ ಹೇಳುವುದರಿಂದ ನಿಮಗೆ ಕಾನೂನಿನ ವಿವಾದಗಳು, ಸಂಕಷ್ಟಗಳಿದ್ದರೆ ನಿವಾರಣೆಯಾಗುವುದು.
ಓಂ ಹಂ ಹನುಮತೇ ರುದ್ರಾತ್ಮಕಾಯಂ ಹಮ್ ಫಟ್- ಈ ಮಂತ್ರವು ನಿಮ್ಮನ್ನು ಮೃತ್ಯುಭಯದಿಂದ ದೂರ ಮಾಡುತ್ತದೆ. ಅಕಾಲ ಮೃತ್ಯು ಭಯವಿದ್ದರೆ ತಪ್ಪದೇ ಈ ಮಂತ್ರವನ್ನು ಜಪಿಸಿ.
ಓಂ ಹಂ ಪವನ ನಂದನಾಯೇ ಸ್ವಾಹ- ಈ ಮಂತ್ರವನ್ನು ಹೇಳುವುದರಿಂದ ಹನುಮಂತನ ಆಶೀರ್ವಾದ ಪಡೆಯುತ್ತೀರಿ. ವಿಶೇಷವಾಗಿ ಇದನ್ನು ಬ್ರಹ್ಮಚಾರಿಗಳು ಹೇಳಿದರೆ ಉತ್ತಮ.
ಓಂ ನಮೊ ಹರಿ ಮರ್ಕಟ ಮರ್ಕಟಾಯೇ ಸ್ವಾಹ- ಈ ಮಂತ್ರವನ್ನು ಹೇಳುವುದರಿಂದ ಶತ್ರುಭಯ ನಾಶವಾಗುತ್ತದೆ.
ಓಂ ನಮೋ ಭಗವತೇ ಆಂಜನಾಯಾಯೇ ಮಹಾಬಲಾಯೇ ಸ್ವಾಹ- ಈ ಮಂತ್ರವನ್ನು ಹೇಳುವುದರಿಂದ ರೋಗ ಭಯ ನಾಶವಾಗಿ ನೀವು ಆರೋಗ್ಯವಂತರಾಗುತ್ತೀರಿ.
ಓಂ ನಮೋ ಭಗವತೇ ಹನುಮತೇ ನಮಃ- ಜೀವನದಲ್ಲಿ ಶಾಂತಿ, ಯಶಸ್ಸು, ಸಂತೋಷವಿರಬೇಕೆಂದರೆ ಈ ಮಂತ್ರವನ್ನು ತಪ್ಪದೇ ಜಪಿಸಿ.