ಮಂಗಳಸೂತ್ರಕ್ಕೂ ಇದೆಯಂತೆ ದೋಷ

ಮಂಗಳವಾರ, 5 ಡಿಸೆಂಬರ್ 2017 (07:13 IST)
ಬೆಂಗಳೂರು: ಹೆಣ್ಣುಮಕ್ಕಳಿಗೆ ಮಂಗಳಸೂತ್ರ ಅತಿ ಅಮೂಲ್ಯವಾದದ್ದು. ವಿವಾಹಿತ ಸ್ತ್ರೀಯರು ಮಂಗಳಸೂತ್ರಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ  ನೀಡುತ್ತಾರೆ. ಯಾಕೆಂದರೆ ಅವರಿಗೆ ಈ ಮಂಗಳಸೂತ್ರ ಎನ್ನುವುದು ಪತಿಯ ಸ್ವರೂಪ.



ಮಂಗಳಸೂತ್ರವು ಕುತ್ತಿಗೆಯಿಂದ ಯಾವಾಗಲೂ ಕಳಚಿ ಬೀಳುತ್ತಿದ್ದರೆ, ಒಂದು ವೇಳೆ ಕಳೆದುಹೋದರೆ, ಮುರಿದು ಹೋದರೆ ಪತಿಗೆ ಪದೇ ಪದೇ ಅನಾಹುತವಾಗುತ್ತಿದ್ದರೆ, ಅಂತಹವರ ಮಂಗಳಸೂತ್ರಕ್ಕೆ ದೋಷವಿದೆ ಎನ್ನುತ್ತಾರೆ.



ಇದಕ್ಕೆ ಪರಿಹಾರವೇನೆಂದರೆ ಮಾಂಗಲ್ಯ ಪ್ರಧಾನಿ ಶ್ರೀ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಹೋಗಿ ನಮ್ಮ ಶಕ್ತಿಗನುಸಾರವಾಗಿ ಒಂದು ಸಣ್ಣ ಮಾಂಗಲ್ಯ ಮಾಡಿಸಿ ದೇವಿಗೆ ಸಮರ್ಪಣೆ ಮಾಡಿದರೆ ಮಾಂಗಲ್ಯ ದೋಷ ಪರಿಹಾರವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.



ಮಾಂಗಲ್ಯಕ್ಕೆ ಕೆಲವು ಸ್ತ್ರೀಯರು ಪಿನ್ನುಗಳನ್ನು ಹಾಕುತ್ತಾರೆ. ಹಾಗೇ ಮಾಡಬಾರದು. ಯಾಕೆಂದರೆ ಅದು ದಾರಿದ್ರ್ಯದ ಸಂಕೇತ.  ಕಬ್ಬಿಣದ ವಸ್ತುಗಳು ಮಾಂಗಲ್ಯದ ಶಕ್ತಿಗಳನ್ನು ಸೆಳೆದುಕೊಳ್ಳುತ್ತದೆ. ಇದರಿಂದ ಪತಿಯ ಆರೋಗ್ಯ ಕೆಡುತ್ತದೆ. ಹಾಗೆ ಮಾಂಗಲ್ಯವನ್ನು ಕಳಚಿ ಇಡಬಾರದು. ಸದಾ ಕುತ್ತಿಗೆಯಲ್ಲಿ ಇರಬೇಕು.  ಇದು ಪತಿಯ ಆರೋಗ್ಯ ಹೆಚ್ಚಿಸುವುದಲ್ಲದೇ, ದುಷ್ಟಶಕ್ತಿಗಳಿಂದ ಸಂಸಾರವನ್ನು ರಕ್ಷಣೆ ಮಾಡುತ್ತದೆ ಎಂದು ಪಂಡಿತರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ