ದೃಷ್ಟಿದೋಷ ನಿವಾರಿಸಲು ಇಂದು ಹುಣ್ಣಿಮೆಯಂದು ಕುಂಕುಮ ನೀರಿಗೆ ಇದನ್ನು ಬೆರೆಸಿ ಹೀಗೆ ಮಾಡಿ

ಗುರುವಾರ, 1 ಅಕ್ಟೋಬರ್ 2020 (08:26 IST)
ಬೆಂಗಳೂರು :  ಇಂದು ಶಕ್ತಿಶಾಲಿ ಹುಣ್ಣಿಮೆ ಇದೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗಲು ಕುಂಕುಮ ನೀರಿಗೆ ಇದನ್ನು ಬೆರೆಸಿ ಈ ಚಿಕ್ಕ ಕೆಲಸ ಮಾಡಿ.

ಇಂದು ಸಂಜೆ 5 ಗಂಟೆಯಿಂದ 8 ಗಂಟೆಯೊಳಗೆ ಕುಂಕುಮ ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಾಕಿ ಮನೆಯ ಹೊರಭಾಗದಲ್ಲಿ ನಿಂತು ಬಲಭಾಗದಿಂದ ಮೂರುಸುತ್ತು ಹಾಗೂ ಎಡಭಾಗದಿಂದ ಮೂರು ಸುತ್ತು ದೃಷ್ಟಿ ತೆಗೆದು ‘ಓಂ ಕಾಲಭೈರವಾಯ ನಮಃ’ ಮಂತ್ರವನ್ನು 3 ಬಾರಿ ಪಠಿಸಬೇಕು. ಬಳಿಕ ಆ ನೀರನ್ನು 4 ದಾರಿ ಸೇರುವ ರಸ್ತೆಯಲ್ಲಿ ಚೆಲ್ಲಿ ತಿರುಗಿ ನೋಡದೆ ಮನೆಗೆ ಬಂದು ಕೈಕಾಲು ತೊಳೆದು ಒಳಗೆ ಬರಬೇಕು. ಇದರಿಂದ ಕೆಟ್ಟ ದೃಷ್ಟಿಗಳು ಕಳೆದುಹೋಗುತ್ತದೆ.  ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ