ಓಂ ತ್ರಯಂಬಕಂ ಯಜಾಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಂಮೃತಾತ್
ಇದು ಮೃತ್ಯುಂಜಯ ಮಂತ್ರವಾಗಿದೆ. ಇದನ್ನು ಪ್ರತಿನಿತ್ಯ 108 ಬಾರಿ ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಕಾಣುವಿರಿ. ಆದರೆ ನೆನಪಿರಲಿ, ಮೃತ್ಯುಂಜಯ ಮಂತ್ರ ಪಠಿಸುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು. ತಪ್ಪುಗಳಾದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ಮಣೆ ಮೇಲೆ ಕುಳಿತು ಮೃತ್ಯುಂಜಯ ಜಪ ಮಾಡಬೇಕು. ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸಿನಲ್ಲೇ ಹೇಳಬೇಕು. ಶಿವನ ಫೋಟೋ ಮುಂದೆ ಕುಳಿತುಕೊಂಡು ಏಕಾಗ್ರತೆಯಿಂದ ಮಂತ್ರೋಚ್ಛಾರಣೆ ಮಾಡಬೇಕು.