ಬೆಂಗಳೂರು : ವಾಸ್ತು ಪ್ರಕಾರ ಮನೆ ನಿರ್ಮಿಸಿದರೆ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಇರುತ್ತದೆ. ಹಾಗಾಗಿ ಮನೆಯನ್ನು ತಯಾರಿಸುವಾಗ ಯಾವ ತರಹದ ಮರಗಳನ್ನು ಬಳಕೆ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಮನೆಯ ಕಿಟಕಿ , ಬಾಗಿಲು, ಪೀಠೋಪಕರಣಗಳನ್ನು ತಯಾರಿಸಲು ಸಾಲ್, ತಾಲ್, ಅಶೋಕ, ತೇಗದ ಮರ ಶ್ರೇಷ್ಠವೆಂದು ಹೇಳಲಾಗುತ್ತದೆ. ಆದರೆ ಸುಟ್ಟ ಮರ, ರಸ್ತೆಯ ಬದಿಯ ಮರ, ದೇವಾಲಯದಲ್ಲಿರುವ ಮರ ಮತ್ತು ಚಂಡಮಾರುತದಿಂದ ಉರುಳಿದ ಮರಗಳನ್ನು ಮನೆಗೆ ಬಳಸಬಾರದು. ಇದರಲ್ಲಿ ನಕರಾತ್ಮಕ ಶಕ್ತಿಗಳಿದ್ದು, ಅವು ಮನೆಗೆ ಪ್ರವೇಶಿಸುತ್ತದೆ ಎನ್ನಲಾಗುತ್ತದೆ.