ದೀಪಾವಳಿ ಹಬ್ಬಕ್ಕೂ ಮೊದಲು ಮನೆಯಲ್ಲಿರುವ ಈ ವಸ್ತುಗಳನ್ನು ಹೊರಹಾಕಿ

ಶುಕ್ರವಾರ, 25 ಅಕ್ಟೋಬರ್ 2019 (07:41 IST)
ಬೆಂಗಳೂರು : ದೀಪಾವಳಿ ಹಬ್ಬದ ದಿನವು  ಲಕ್ಷ್ಮೀದೇವಿಗೆ ಪ್ರಿಯವಾದ ದಿನ.  ಈ ದಿನ ಲಕ್ಷ್ಮೀದೇವಿಯ ಅನುಗ್ರಹ ಪಡೆಯಲು ಎಲ್ಲರೂ ಆಕೆಯನ್ನು  ಪೂಜಿಸುತ್ತಾರೆ. ಆದರೆ ಈ ಪೂಜೆ ಮಾಡುವ ಮೊದಲು ಅಂದರೆ ದೀಪಾವಳಿ ಹಬ್ಬಕ್ಕೂ ಮೊದಲು ಮನೆಯಲ್ಲಿರುವ ಈ ವಸ್ತುಗಳು ಹೊರಹಾಕಿ. ಇಲ್ಲವಾದರೆ  ಮನೆಗೆ ಲಕ್ಷ್ಮೀ ಪ್ರವೆಶಿಸುವುದಿಲ್ಲ.




ಮನೆಯಲ್ಲಿ ಮುಂದೆ ಉಪಯೋಗಕ್ಕೆ ಬರಬಹುದು ಎಂದು ಹಳೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿರುತ್ತೇವೆ. ಅಂತಹ ವಸ್ತುಗಳನ್ನು ಹಬ್ಬಕ್ಕೂ ಮೊದಲೇ ಹೊರಹಾಕಿ ಸ್ವಚ್ಚಮಾಡಿ. ಹಾಗೇ ಒಡೆದ ಕನ್ನಡಿ, ಗಾಜಿನ ಚೂರುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.


ಹಾಗೇ ಮುರಿದ ಮಂಚ ಅಥವಾ ಕುರ್ಚಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ ಅದನ್ನು ಈ ಕೂಡಲೇ ಹೊರ ಹಾಕಿ. ಅಲ್ಲದೇ ನಿಂತ ಗಡಿಯಾರ ಅಥವಾ ಒಡೆದ ಗಡಿಯಾರವನ್ನು ಮನೆಯಿಂದ ಆಚೆಗೆ ಹಾಕಿ. ಹಾಳಾದ ಚಿತ್ರಪಟ, ಹರಿದ ಬಟ್ಟೆ, ಹರಿದ ಚಪ್ಪಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಹಬ್ಬಕ್ಕೂ ಮೊದಲೇ  ಸ್ವಚ್ಚ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ