ಬೆಂಗಳೂರು: ಕಾಗೆ ಶನಿಯ ವಾಹನವಾಗಿದ್ದು, ಅದು ಕೂರುವ ದಿಕ್ಕಿಗೂ ನಮ್ಮ ಭವಿಷ್ಯ, ಶಕುನಗಳಿಗೂ ಸಂಬಂಧವಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಕಾಗೆ ಕೂರುವುದಕ್ಕೂ ಶಕುನಗಳಿಗೂ ಏನು ಸಂಬಂಧ ಎಂದು ನೋಡೋಣ.
ಕಾಗೆ ಶನಿಯ ವಾಹನ. ಕೆಲವರು ಇದನ್ನು ಪೂಜನೀಯವಾಗಿ ನೋಡುತ್ತಾರೆ. ಮತ್ತೆ ಕೆಲವರು ಕಾಗೆ ಅಪಶಕುನದ ಸಂಕೇತ ಎಂದು ಒದ್ದೋಡಿಸುತ್ತಾರೆ. ಕಾಗೆ ಮನೆಯೊಳಗೆ ಪ್ರವೇಶಿಸಬಾರದು. ಕಾಗೆ ಕೂಗುವುದಕ್ಕೂ ಕೆಲವು ಅರ್ಥಗಳಿವೆ ಎಂಬಿತ್ಯಾದಿ ನಂಬಿಕೆಗಳು ನಮ್ಮಲ್ಲಿವೆ.
ನಮ್ಮ ಮನೆಯ ದಕ್ಷಿಣ ಭಾಗದಲ್ಲಿ ಕುಳಿತು ಕಾಗೆ ಜೋರಾಗಿ ಅರಚುತ್ತಿದ್ದರೆ ಏನೋ ಕೆಟ್ಟದ್ದು ಸಂಭವಿಸಲಿದೆ ಎಂದರ್ಥ. ನಿಮ್ಮ ಪಿತೃಗಳಿಗೆ ನೆಮ್ಮದಿಯಿಲ್ಲ, ಪಿತೃ ದೋಷ ಕಾಡುತ್ತಿದೆ ಎನ್ನುವುದರ ಸೂಚನೆ ಇದಾಗಿದೆ. ನಿಮ್ಮ ಹಿರಿಯರಿಗೆ ಯಾವುದೋ ಒಂದು ವಿಚಾರದಲ್ಲಿ ನಿಮ್ಮಲ್ಲಿ ಅಸಮಾಧಾನವಿದೆ ಎಂಬುದನ್ನು ಇದು ಸೂಚಿಸುತ್ತದೆ.
ಹಾಗಂತ ಕಾಗೆ ಕೆಟ್ಟದ್ದರ ಸಂಕೇತ ಎಂದೇ ಅರ್ಥವಲ್ಲ. ಕಾಗೆ ನೀರು ಕುಡಿಯುವುದನ್ನು ನೋಡಿದರೆ ನಮಗೆ ಒಳ್ಳೆಯದಾಗುವುದರ ಸೂಚನೆಯಂತೆ. ನಮ್ಮ ಹಣಕಾಸಿನ ಸಂಕಷ್ಟಗಳು ದೂರವಾಗುವುದರ ಸೂಚನೆ ಎನ್ನಲಾಗುತ್ತದೆ. ನೀವು ಯಾವುದೋ ಒಳ್ಳೆಯ ಕೆಲಸಕ್ಕೆ ಹೊರಟಾಗ ಕಾಗೆ ನೀರು ಕುಡಿಯುವುದನ್ನು ನೋಡಿದರೆ ನಿಮ್ಮ ಕೆಲಸ ನೆರವೇರುತ್ತದೆ ಎಂದೇ ಅರ್ಥ. ಒಂದು ವೇಳೆ ಕಾಗೆ ಒಂದು ತುಂಡು ಆಹಾರ ವಸ್ತುವನ್ನು ಕಚ್ಚಿಕೊಂಡು ಹಾರುವುದನ್ನು ನೋಡಿದರೆ ನಿಮ್ಮ ಬಯಕೆ ನೆರವೇರುತ್ತದೆ ಎಂದು ಅರ್ಥೈಸಿಕೊಳ್ಳಬೇಕು.