ಮನೆ ನಿರ್ಮಿಸಲು ಇಂತಹ ಭೂಮಿ ಸೂಕ್ತವಲ್ಲ

ಸೋಮವಾರ, 30 ನವೆಂಬರ್ 2020 (07:19 IST)
ಬೆಂಗಳೂರು : ಮನೆಯನ್ನು ನಿರ್ಮಿಸಲು ನಾವು ಭೂಮಿಯನ್ನು ಆರಿಸುತ್ತೇವೆ. ಆದರೆ ಮನೆಯನ್ನು ನಿರ್ಮಿಸುವ ಭೂಮಿ ಸರಿಯಾದ ಆಕಾರದಲ್ಲಿರಬೇಕು ಎಂಬುದನ್ನು ತಮೊದಲು ತಿಳಿದುಕೊಳ್ಳಿ. ಇಲ್ಲವಾದರೆ ಅದರಿಂದ ಮುಂದೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಭೂಮಿಯು ವಿವಿಧ ಆಕಾರದಲ್ಲಿರುತ್ತದೆ. ಕೆಲವು ಭೂಮಿಯು ತ್ರಿಕೋನಾಕಾರದಲ್ಲಿದ್ದರೆ, ಕೆಲವೊಂದು ಐದು ಕೋನಗಳನ್ನು ಒಳಗೊಂಡಿರುತ್ತದೆ. ಇಂತಹ ಭೂಮಿ ಮನೆ ಮಾಡಲು ಉತ್ತಮವಲ್ಲ. ನದಿ ಸವೆತದ ಬಳಿ ಹಾಗೂ ಸಶ್ಮಾನದ ಹತ್ತಿರವಿರುವ   ಭೂಮಿಯನ್ನು ಖರೀದಿಸಬಾರದು. ಅದು ನಷ್ಟಕ್ಕೆ ಕಾರಣವಾಗುತ್ತದೆ. ಮನೆ ನಿರ್ಮಿಸಲು ಅಂತಹ ಭೂಮಿಯನ್ನು ಆರಿಸಬಾರದು.

ಮನೆ ನಿರ್ಮಿಸಲು ನಾಲ್ಕು ಕೋನವಿರುವ ಭೂಮಿ ತುಂಬಾ ಒಳ್ಳೆಯದು. ಅಂದರೆ ಅದು ಚೌಕಾಕಾರ ಅಥವಾ
ಆಯತಾಕಾರದಲ್ಲಿರುತ್ತದೆ. ಅಂತಹ ಭೂಮಿಯಲ್ಲಿ ನೀವು ಮನೆ ನಿರ್ಮಿಸಿದರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ತಿಳಿಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ