ವಿಷ್ಣು ಸಹಸ್ರನಾಮ ಓದುವುದರಿಂದ ನಮ್ಮ ಜೀವನದ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ, ಸಂಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ವಿಷ್ಣು ಸಹಸ್ರನಾಮವನ್ನು ಓದಲು ಆಗದೇ ಇದ್ದಲ್ಲಿ ಈ ಒಂದು ಮಂತ್ರವನ್ನು ಜಪಿಸಿದರೂ ಸಾಕು.
ವಿಷ್ಣು ಸಹಸ್ರನಾಮ ಎನ್ನುವುದು ಸುದೀರ್ಘವಾದ ಸ್ತೋತ್ರ ಪಾರಾಯಣವಾಗಿದೆ. ಕೆಲವರಿಗೆ ಇಷ್ಟು ದೊಡ್ಡ ಸ್ತೋತ್ರವನ್ನು ಓದಲು ಅನಾನುಕೂಲಗಳಿರಬಹುದು. ಓದಲು ಕಷ್ಟವಾಗಬಹುದು ಇಂತಹ ಸಂದರ್ಭದಲ್ಲಿ ಅವರು ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಿದರೂ ಸಾಕು.
ಈ ಒಂದು ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ 108 ಶ್ಲೋಕಗಳಿರುವ ವಿಷ್ಣು ಸಹಸ್ರನಾಮವನ್ನು ಓದಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ. ಶ್ರೀ ರಾಮ ನಿನ್ನ ನಾಮವನ್ನು ಜಪಿಸುವುದು ನನಗೆ ಅತ್ಯಂತ ಸಂತೋಷ ಕೊಡುತ್ತದೆ ಎಂದು ಈ ಮಂತ್ರದಲ್ಲಿ ಹೇಳಲಾಗುತ್ತದೆ.