ನವರಾತ್ರಿಗೆ ಅಖಂಡ ದೀಪ ಹಚ್ಚುವವರು ತಪ್ಪದೇ ಈ ನಿಯಮ ಪಾಲಿಸಿ

ಭಾನುವಾರ, 18 ಅಕ್ಟೋಬರ್ 2020 (07:45 IST)
ಬೆಂಗಳೂರು : ಶನಿವಾರದಿಂದ ನವರಾತ್ರಿ ಶುರುವಾಗಿದೆ. ಅಂದು ಮನೆಯಲ್ಲಿ ಅಖಂಡ ದೀಪ ಹಚ್ಚಿದರೆ ಮನೆಗೆ ಶ್ರೇಯಸ್ಸು ಲಭಿಸುತ್ತದೆ, ಸಮಸ್ಯೆಗಳು ದೂರವಾಗುತ್ತದೆ. ಆದರೆ ಆ ವೇಳೆ ತಪ್ಪದೇ ಈ ನಿಯಮವನ್ನು ಪಾಲಿಸಬೇಕು.

ಅಖಂಡ ದೀಪವನ್ನು ಯಾರು ಬೇಕಾದರೂ ಹಚ್ಚಬಹುದು. ಆದರೆ ದೀಪ ಹಚ್ಚಿದ ಮೇಲೆ ನಿಮ್ಮ ವ್ರತ ಮುಗಿಯುವವರೆಗೂ ಆ ದೀಪ ಆರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಆರಿದರೆ ಅಶುಭ ಫಲಗಳನ್ನು ಎದುರಿಸಬೇಕಾಗುತ್ತದೆ. ಹಾಗೇ ಮನೆಗೆ ಬೀಗ ಹಾಕಬಾರದು, ಸುಳ್ಳು ಹೇಳಬಾರದು,

ಹಾಗೇ ಮನೆಯಲ್ಲಿ ದೇವರಿಗೆ ದೀಪ ಹಚ್ಚಿದ ಮೇಲೆ ತೆಂಗಿನಕಾಯಿಯನ್ನು ಹಾಗೂ ಕಲ್ಲುಸಕ್ಕರ ಅಥವಾ ಬೆಲ್ಲ ನೈವೇದ್ಯವಾಗಿ ದೇವಿಗೆ ನೀಡಿದರೆ ನಿಮಗೆ ಚಾಮುಂಡೇಶ್ವರಿಯ ಅನುಗ್ರಹ ದೊರೆಯುತ್ತದೆ. ಇದರಿಂದ ನವರಾತ್ರಿಯ ಪೂಜಾಫಲ ನಿಮಗೆ ದೊರೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ