ಇಂದಿನ ದಿನ ಭವಿಷ್ಯ ಪ್ರಕಾರ ಕೆಲ ರಾಶಿಗಳಿಗೆ ಶುಭ ದಿನವಾಗಿದೆ. ವಾಹನ ಖರೀದಿ, ಸೇರಿದಂತೆ ಅನೇಕ ವಿಧದಲ್ಲಿ ಸಂಭ್ರಮ ಮನೆ ಮಾಡಲಿದೆ. ಅದರಂತೆ ರಾಶಿ ಭವಿಷ್ಯ ಹೀಗಿದೆ.
ಮೇಷ: ಈ ರಾಶಿಯವರಿಗೆ ಇಂದು ಸಾಮಾಜಿಕವಾಗಿ ಉತ್ತಮ ಗೌರವ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯವಿದ್ದು, ಆತ್ಮ ಗೌರವಕ್ಕಾಗಿ ಸಾಲವನ್ನು ತೀರಿಸಲಿದ್ದಾರೆ. ಶುಭಸಂಖ್ಯೆ 8.
ವೃಷಭ: ಈ ರಾಶಿಯವರು ಇಂದು ಪ್ರಯಾಣ ಬೆಳೆಸಲಿದ್ದಾರೆ. ಇನ್ನೂ ಕೃಷಿಕರಲ್ಲಿ ಜೇನು ಕೃಷಿಕರಿಗೆ ಉತ್ತಮ ದಿನ. ಇವರ ಶುಭಸಂಖ್ಯೆ 2 ಆಗಿದ್ದು, ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ಸರ್ಕಾರಿ ನೌಕರಿಯಲ್ಲಿ ಬದಲಾವಣೆ.
ಮಿಥುನ: ಆರೋಗ್ಯ ಸಂಬಂಧ ಕಾಳಜಿ ವಹಿಸುವುದು ಉತ್ತಮ. ಪ್ರೇಮದಲ್ಲಿ ಜಯ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಶಸ್ಸು. ಶುಭಸಂಖ್ಯೆ:1
ಸಿಂಹ: ಕೆಲಸದ ವಾತಾವರಣದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಯಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬಂದು ಸಮಾಧಾನ ಶುಭಸಂಖ್ಯೆ: 7
ಕನ್ಯಾ: ಈ ರಾಶಿಯವರಿಗೆ ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗಲಿದೆ. ಹೋಟೆಲ್ ವ್ಯವಹಾರದಲ್ಲಿ ಲಾಭ. ಮಹಿಳಾ ಉದ್ಯಮಿಗಳಿಗೆ ಹೂಡಿಕೆದಾರರ ನೆರವು. ಶುಭಸಂಖ್ಯೆ: 8
ತುಲಾ: ಶತ್ರು ನಿಗ್ರಹ ಮಾಡುವಿರಿ. ಇವರ ಎಚ್ಚರಿಕೆಯಿಂದ ತಮ್ಮ ಆತ್ಮಗೌರವಕ್ಕೆ ಕುಂದಾಗದಂತೆ ನಡೆದುಕೊಳ್ಳಿ. ಮಹಿಳೆಯರಿಗೆ ಔದ್ಯೋಗಿಕವಾಗಿ ಅವಕಾಶ ಪ್ರಾಪ್ತಿ. ಶುಭಸಂಖ್ಯೆ: 9
ವೃಶ್ಚಿಕ: ಈ ರಾಶಿಯವರಿಗೆ ದೂರಾಲೋಚನೆಗಳು ಕಾರ್ಯಗತವಾಗಲಿವೆ. ವ್ಯಾಪಾರದಲ್ಲಿ ಎಚ್ಚರಿಕೆ ಅಗತ್ಯ. ಪೊಲೀಸ್ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ. ಶುಭಸಂಖ್ಯೆ: 3
ಧನುಸ್ಸು: ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ದೇವತಾ ಕಾರ್ಯದಲ್ಲಿ ನಿರತರಾಗುವಿರಿ. ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 9
ಮಕರ: ಈ ರಾಯಿಯವರಿಗೆ ಮಾತೆಯ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುವಿರಿ. ಆರ್ಥಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ದಿನದ ಅಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ:2
ಕುಂಭ: ಮನೆಯಲ್ಲಿನ ಆಸ್ತಿ ವಿಚಾರ ಸಂಬಂದ ಸಮಾಧಾನಕರವಾಗಿ ಅಂತ್ಯ. ಭವಿಷ್ಯದ ಚಿಂತನೆ ದೂರ. ಗೃಹ ನಿರ್ವಣಕ್ಕೆ ಚಾಲನೆ. ಚಾಲಕರಿಗೆ ಶುಭದಿನ. ಶುಭಸಂಖ್ಯೆ: 3
ಮೀನ: ಈ ರಾಶಿಯಲ್ಲಿಉಪನ್ಯಾಸಕರು ಮತ್ತು ಶಿಕ್ಷಕ ಹುದ್ದೆಯಲ್ಲಿರುವವರಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಕೃಷಿಕರ ಫಸಲಿಗೆ ಸೂಕ್ತ ಬೆಲೆ ಸಿಗಲಿದೆ .ಶುಭಸಂಖ್ಯೆ: 6