ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

Krishnaveni K

ಮಂಗಳವಾರ, 30 ಡಿಸೆಂಬರ್ 2025 (08:59 IST)
ಬೆಂಗಳೂರು: ಇಂದು ವೈಕುಂಠ ಏಕಾದಶಿಯಾಗಿದ್ದು ಮಹಾವಿಷ್ಣುವಿನ ಆರಾಧನೆ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ.
 

ವೈಕುಂಠ ಏಕಾದಶಿಯಂದು ವಿಷ್ಣುವಿನ ಆರಾಧನೆ, ಮಂತ್ರ ಪಠನೆ, ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಅಲ್ಲದೆ ಮೋಕ್ಷ ಪ್ರಾಪ್ತಿಯಾಗುವುದು ಎಂಬ ನಂಬಿಕೆಯಿದೆ. ಸ್ವರ್ಗದ ಬಾಗಿಲುಗಳು ತೆರೆದಿರುತ್ತದೆ ಎನ್ನಲಾಗಿದೆ.

ವಿಶೇಷವಾಗಿ ವೈಕುಂಠ ಏಕಾದಶಿ ದಿನ ಮಹಾವಿಷ್ಣುವಿನ ಮೂಲ ಮಂತ್ರ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರವನ್ನು ಪಠಿಸಿ. ಇದರ ಜೊತೆಗೆ ಈ ಒಂದು ಮಂತ್ರವನ್ನು ತಪ್ಪದೇ ಓದಿ. ಇಲ್ಲದೇ ಹೋದರೆ ವೈಕುಂಠ ಏಕಾದಶಿ ಅಪೂರ್ಣವೆಂದೇ ಹೇಳಬಹುದು.

ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹಾರಂ
ಸದಾ ಬಸಂತಂ ಹೃದಯಾರಬಿಂದೇ ಭವಂ ಭವಾನೀಸಹಿತಂ ನಮಾಮಿ

ಮಹಾವಿಷ್ಣುವನ್ನು ಮೆಚ್ಚಿಸಲು ಸ್ವತಃ ಭಗವಾನ್ ಶಿವನೇ ಪಠಿಸಿದ ಮಂತ್ರವಿದು. ಹೀಗಾಗಿ ಈ ಮಂತ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪಠಿಸುವುದರಿಂದ ಮಹಾವಿಷ್ಣುವಿನ ಜೊತೆಗೆ ಶಿವನ ಅನುಗ್ರಹವೂ ದೊರೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ