ಕುಡಿತದ ಚಟ ಬಿಡಲು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ

ಶನಿವಾರ, 12 ಅಕ್ಟೋಬರ್ 2019 (08:19 IST)
ಬೆಂಗಳೂರು : ಕೆಲವರು ಕುಡಿತದ ದಾಸರಾಗಿರುತ್ತಾರೆ. ಅಂತವರನ್ನು ಏನೇ ಮಾಡಿದರೂ ಕುಡಿತದ ಚಟದಿಂದ ಹೊರಗೆ ತರಲು ಸಾಧ್ಯವಾಗದಿದ್ದರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.




ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನ ಮಹಲ್ ಎಂಬ ಸ್ಥಳದಲ್ಲಿ ಈ ಪಾಂಡುರಂಗ ಸ್ವಾಮಿಯ ದೇವಾಲಯವಿದೆ. ಕುಡಿತದ ಚಟವನ್ನು ಬಿಡುವುದಕ್ಕಾಗಿ ಶುಕ್ಲ ಏಕಾದಶಿ ಹಾಗೂ ಕೃಷ್ಣ ಏಕಾದಶಿ ಈ ಎರಡು ದಿನದಂದು ಪಾಂಡುರಂಗ ಸ್ವಾಮಿಯ ಮಾಲೆಯನ್ನು ಹಾಕಿಕೊಳ್ಳಬೇಕಂತೆ.


ಮಾಲೆ ಹಾಕಲು ಇಚ್ಛಿಸುವವರು ಹಿಂದಿನ ದಿನ ರಾತ್ರಿಯಿಂದಲೇ ದೇವರ ಧ್ಯಾನವನ್ನು ಮಾಡಬೇಕು. ಮಾರನೆಯ ದಿನ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ಸೇವಾ ಕಾಣಿಕೆಯನ್ನು ಕಟ್ಟಿ ದೇವಸ್ಥಾನದಲ್ಲಿ ಅರ್ಚಕರು ನೀಡಿದ ಜಪಮಾಲೆಯನ್ನು ಧರಿಸಿ ವ್ರತವನ್ನು ಸ್ವೀಕಾರ ಮಾಡಬೇಕು. ವ್ರತದಲ್ಲಿ ಇರುವಾಗ ಪ್ರತಿ ಏಕಾದಶಿಗೆ ಗುಂತಕಲ್ ದೇವಸ್ಥಾನಕ್ಕೆ ಬಂದು ಪೂಜೆ ಮಾಡಬೇಕು ಹಾಗೂ ಅಲ್ಲಿಯೇ ನಿದ್ರೆ ಮಾಡಬೇಕು.


ಆ ನಂತರ ಮೂರು ಏಕಾದಶಿಗಳು ತೀರಿದ ಮೇಲೆ ಮಾಲೆಯನ್ನು ಬಿಚ್ಚ ಬೇಕಾಗುತ್ತದೆ. ಹೀಗೆ ವ್ರತವನ್ನು ಪೂರ್ತಿ ಮನಸ್ಸಿಂದ ಮಾಡಿದವರು ಮತ್ತೆ ಕುಡಿತದ ದಾಸರಾಗುವುದಿಲ್ಲವಂತೆ ಹಾಗೆ ಆದ ಉದಾಹರಣೆಗಳು ಇವೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ