ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಒಳ್ಳೆಯದು ಗೊತ್ತಾ?

ಗುರುವಾರ, 13 ಡಿಸೆಂಬರ್ 2018 (15:12 IST)
ಬೆಂಗಳೂರು : ದೇವರಿಗೆ ಪೂಜೆ ಮಾಡುವಾಗ ನೈವೇದ್ಯ ಅರ್ಪಿಸುತ್ತೇನೆ. ಆದರೆ ಎಲ್ಲಾ ದೇವರಿಗೂ ಒಂದೇ ರೀತಿಯ ನೈವೇದ್ಯ ಅರ್ಪಿಸಬಾರದು. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು ಬೇರೆ ಬೇರೆ ಇರುತ್ತವೆ. ಆಯಾ ದೇವರಿಗೆ ಪ್ರಿಯವಾದ ಪ್ರಸಾದವನ್ನು ಆ ದೇವರಿಗೆ ನೈವೇದ್ಯ ಮಾಡುವುದು ಒಳ್ಳೆಯದು.

ಶ್ರೀ ವಿಷ್ಣುವಿಗೆ ಕೀರ್ ಅಥವಾ ರವೆಯ ಹವ್ಲಾ ಎಂದರೆ ಪ್ರಿಯ. ಹಾಗಾಗಿ ಶ್ರೀವಿಷ್ಣುವಿನ ಆರಾಧನೆ ಮಾಡುವಾಗ ಈ ಎರಡು ಸಿಹಿಯಲ್ಲಿ ಒಂದನ್ನು ತಯಾರಿಸಿ ನೈವೇದ್ಯ ಮಾಡಬೇಕು. ದೇವರ ದೇವ ಮಹಾದೇವ ಶಿವ, ಪಂಚಾಮೃತ ಪ್ರಿಯ. ವಿದ್ಯಾ ದೇವಿ ಸರಸ್ವತಿಗೆ ಭಕ್ತರು ಹಾಲು, ಪಂಚಾಮೃತ, ತುಪ್ಪ, ಬೆಣ್ಣೆ, ಬಿಳಿ ಅಕ್ಕಿಯ ಲಾಡಿನ ನೈವೇದ್ಯ ಮಾಡಬೇಕು.

 

ಧನ ಲಕ್ಷ್ಮಿಗೆ ಮಿಠಾಯಿ ಹಾಗೂ ಅಕ್ಕಿಯ ಕೇಸರಿ ಬಾತ್ ಅರ್ಪಣೆ ಮಾಡಿದರೆ ಉತ್ತಮ. ದುರ್ಗಿಗೆ ಕೀರ್, ಮಿಠಾಯಿ, ಬಾಳೆ ಹಣ್ಣು, ತೆಂಗಿನ ಕಾಯಿಯನ್ನು ನೈವೇದ್ಯ ಮಾಡಬೇಕು. ಪ್ರಥಮ ಪೂಜ್ಯ ಗಣೇಶನಿಗೆ ಮೋದಕವನ್ನು ನೈವೇದ್ಯ ಮಾಡಬೇಕು. ಶ್ರೀರಾಮನಿಗೆ ಕೇಸರಿಬಾತ್, ಕೀರ್ ಎಂದರೆ ಬಹಳ ಇಷ್ಟ. ಶ್ರೀಕೃಷ್ಣನಿಗೆ  ಸಕ್ಕರೆ ಹಾಗೂ ಬೆಣ್ಣೆ ಅರ್ಪಿಸಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ