ಶಿವನನ್ನು ಈ ಬಣ್ಣದ ವಸ್ತುಗಳಿಂದ ಪೂಜಿಸಿ

ಶುಕ್ರವಾರ, 30 ಆಗಸ್ಟ್ 2019 (10:48 IST)
ಬೆಂಗಳೂರು : ಶಿವನು ವೈರಾಗಿ. ಆದರೆ ಅವನು ಭಕ್ತರು ಬೇಡಿಕೆಗಳನ್ನು ಹಾಗೂ ಭಕ್ತರ ಕಷ್ಟಗಳನ್ನು ನೀಗಿಸುವವನು ಎಂದು ಹೇಳುತ್ತಾರೆ. ಆದ್ದರಿಂದ ಶಿವನು ಬೇಗ ಪ್ರಸನ್ನನಾಗಲು ಅವನನ್ನು ಈ ಬಣ್ಣದ ವಸ್ತುಗಳಿಂದ ಪೂಜಿಸಬೇಕಂತೆ.




ಹೌದು. ಶ್ವೇತ ಬಣ್ಣ ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಶಿವನು ವೈರಾಗಿಯಾಗಿರುವುದರಿಂದ ಅವನಿಗೆ ಶ್ವೇತ ಬಣ್ಣವೆಂದರೆ ಬಹಳ ಇಷ್ಟವಂತೆ. ಆದ್ದರಿಂದ ಶಿವನನ್ನು ಬಿಳಿ ಬಣ್ಣದ ವಸ್ತುಗಳಿಂದ ಪೂಜಿಸಬೇಕಂತೆ.


ಶಿವನಪೂಜೆ ಮಾಡುವಾಗ ಶ್ವೇತ ಬಣ್ಣದ ಬಟ್ಟಗಳನ್ನು ಧರಿಸಬೇಕಂತೆ. ಹಾಗೇ ಶಿವ ಪೂಜೆಗೆ  ಶ್ವೇತ ಬಣ್ಣದ ಹೂಗಳನ್ನು, ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆಗಳನ್ನು ಬಳಸಿದರೆ ಶಿವ ಶೀಘ್ರವೇ ಪ್ರಸನ್ನನಾಗಿ ಭಕ್ತರ ಬೇಡಿಕೆಗಳನ್ನು ತಕ್ಷಣ ಈಡೇರಿಸುತ್ತಾನಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ