ಗ್ರಹ ದೋಷ ಹಾಗೂ ಅಪ ಮೃತ್ಯು ದೋಷ ಪರಿಹಾರ ಆಗಲು ಈ ದಿನದಂದು ಹೀಗೆ ಪೂಜೆ ಮಾಡಿ

ಸೋಮವಾರ, 30 ಸೆಪ್ಟಂಬರ್ 2019 (09:29 IST)
ಬೆಂಗಳೂರು : ಕಾಲಭೈರವನ ಶಿವನ ಸ್ವರೂಪ. ಶ್ವಾನ ಈ ದೇವರ  ವಾಹನ. ಈ ದೇವರಿಗೆ ಈ ದಿನ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ಗ್ರಹ ದೋಷ ಹಾಗೂ ಅಪ ಮೃತ್ಯು ದೋಷ ಪರಿಹಾರವಾಗುತ್ತದೆ.
ಮಾರ್ಗಶಿರ ಮಾಸದ ಶುಕ್ಲ ಪಕ್ಷ ಅಷ್ಟಮಿಯನ್ನು ಕಾಲಭೈರವಾಷ್ಠಮಿ ಎಂದು ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಈ ದಿನ ಶ್ವಾನಗಳಿಗೆ ಪೂಜೆ ಮಾಡಿದರೆ ಸಾಕು ಗ್ರಹ ದೋಷವು ಪರಿಹಾರವಾಗುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಈ ದಿನ ನಾಯಿಗೆ ಸ್ನಾನ ಮಾಡಿಸಿ ಪೂಜೆ ಮಾಡಿ ಆಹಾರವನ್ನು ಅಥವಾ ಎಡೆಯನ್ನು ಇಟ್ಟರೆ ಅಪಮೃತ್ಯು ದೋಷ ಹಾಗೂ ನಮ್ಮ ಗ್ರಹಗತಿಗಳ ದೋಷ ಪರಿಹಾರವಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ದಿನ ಕಾಲ ಭೈರವನಿಗೆ ಕರ್ಪೂರ ಅರ್ಚನೆಯನ್ನು ಮಾಡಿಸಿದರೆ ಶುಭ ಫಲಗಳು ದೊರೆಯುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ