ತಿಥಿ ಆರಾಧನೆಯಿಂದ ಜೀವನದಲ್ಲಿ ಸಮೃದ್ಧಿ ಕಾಣಿ

ಶುಕ್ರವಾರ, 31 ಜನವರಿ 2014 (11:58 IST)
PR
ತಿಥಿ ಆರಾಧನೆ: ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ಅವಲಂಬಿಸಿರುತ್ತದೆ. ಹಿಂದೂಗಳಿಗೆ ಮೂಲ ನೆಲೆಯಾಗಿರುವುದು ಧರ್ಮ. ಈ ಧರ್ಮಕ್ಕೆ ಮೂರು ದೃಷ್ಟಿಕೋನಗಳು.

1. ಮೂಲಭೂತ ತತ್ವಗಳ ಅಥವಾ ಸಿದ್ದಾಂತದ ದೃಷ್ಟಿಕೋನ 2. ಆ ತತ್ವಗಳನ್ನು ಜನ ಸಾಮಾನ್ಯನಿಗೆ ನಿರೂಪಿಸುವ ಪೌರಾಣಿಕ ದೃಷ್ಟಿಕೋನ. 3. ಆ ತತ್ವಗಳ ಸಿದ್ದಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆಯ ದೃಷ್ಟಿಕೋನ.

ಸೈದ್ದಾಂತಿಕ ನೆಲೆಯಲ್ಲಿ ದೇವರ ಅಸ್ತಿತ್ವ, ಮಾನವ ಚೇತನದ ಸ್ವರೂಪ, ಜಗತ್ತಿನ ದೃಷ್ಟಿ, ಜೀವನದ ಪರಮ ಪುರುಷಾರ್ಥ ಮತ್ತು ಅದರ ಸಾಧನ ಪಥ, ದಿನನಿತ್ಯದ ಜೀವನದ ಸಿಹಿ-ಕಹಿ ಅನುಭವಗಳನ್ನೇ ದೃಷ್ಟಾಂತವಾಗಿಸಿಕೊಂಡು ಈ ಎರಡು ದೃಷ್ಟಿಕೋನಗಳು ಮಾನವ ಹೇಗೆ ಬದುಕಬೇಕು ಎಂಬ ಜ್ಞಾನಕ್ಕೆ ಸಾಧನ, ಬುದ್ದಿಯ ವಿಚಾರ ವಿವೇಚನಾ ಶಕ್ತಿಗಳ ಪ್ರಚೋದಕವಾಗಿದೆ. ಭಾವನೆ ಹಾಗೂ ಕಲ್ಪನಾ ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಸಾಧಕ ಹಾಗೂ ಪೂರಕವಾದದ್ದು, ಧರ್ಮದ ಮೂರನೇ ದೃಷ್ಟಿಕೋನವಾದ ನಿತ್ಯ ನೈಮಿತ್ತಿಕ ಕರ್ಮಚಾರಣೆಗಳ ದೃಷ್ಟಿಕೋನ ಕೂಡಾ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ.

ಸಾಂಪ್ರದಾಯಿಕವಾಗಿ ಮೂಡಿಬಂದಿರುವ ಪುರಾಣಗಳ ಮತ್ತು ಅವುಗಳಗೆ ಸಂಬಂಧಪಟ್ಟ ಇತರೆ ಗ್ರಂಥಗಳ ಆಧಾರದಿಂದ ವ್ರತಗಳನ್ನು ವರ್ಗೀಕರಿಸಬಹುದು. ಉಪವಾಸ ಮುಂತಾದ ದೈಹಿಕ ನಿರ್ಬಂಧಗಳನ್ನೊಳಗೊಂಡ ವ್ರತಗಳು ಶಿಕಾಯಿಕ ವ್ರತಗಳುಷಿ. ಸತ್ಯವಚನ, ಧರ್ಮ ಗ್ರಂಥಗಳ ಪಾರಾಯಣ ಮುಂತಾದ ಮಾತಿನ ನಿಯಂತ್ರಣಗಳನ್ನೊಳಗೊಂಡ ವ್ರತಗಳುಷಿ ವಾಚಕ ವ್ರತಗಳುಷಿ. ಜಪ-ಧ್ಯಾನಾಧಿಗಳ ಮೂಲಕ ರಾಗ-ದ್ವೇಷ ಮುಂತಾದ ಮನೋ ದೌರ್ಬಲ್ಯಗಳ ನಿಯಂತ್ರಗಳನ್ನೊಳಗೊಂಡ ವ್ರತಗಳು ಶಿಮಾನಸ ವ್ರತಗಳು. ಆದರೆ ಈ ಮೂರು ಬಗೆಯ ವ್ರತಗಳಲ್ಲೂ ದೈಹಿಕ, ವಾಚಕ, ಮಾನಸಿಕ ನಿಯಂತ್ರಣಗಳಾಗಿರುತ್ತವೆ.

PR
ಎರಡನೇ ಬಗೆಯ ವರ್ಗೀಕರಣವನ್ನು ವ್ರತಕ್ಕೆ ನಿಗದಿಯಾದ ಕಾಲದ ಆಧಾರದ ಮೇಲೆ ಮಾಡಬಹುದು. ಒಂದು ದಿನ ಮಾತ್ರ ನಡೆಯುವ ವ್ರತವನ್ನು ಶಿದಿನವ್ರತಷಿವೆಂದೂ, ಒಂದು ವಾರ ನಡೆಯುವುದನ್ನು ಶಿವಾರವ್ರತಷಿವೆಂದೂ, ಒಂದು ಪಕ್ಷದ ಕಾಲ ನಡೆಯುವುದನ್ನು ಶಿಪಕ್ಷವ್ರತಷಿ ವೆಂದೂ ಒಂದು ತಿಥಿ ಅವಧಿಯಲ್ಲಿ ನಡೆಸಬೇಕಾದ್ದನ್ನು ಶಿತಿಥಿವ್ರತಷಿ, ನಿಯಮಗಳನ್ನು ತಿಳಿದು ಆಚರಿಸಬೇಕು

ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ತಿಥಿ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ತಿಥಿಯನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು.

ತಿಥಿಯ ಆರಾಧನೆ: ಪಾಡ್ಯ ತಿಥಿಯ ಅಧಿದೇವತೆ ಅಗ್ನಿಯಾಗಿದ್ದು, ಪಾಡ್ಯತಿಥಿ ದಿವಸ ಅಗ್ನಿದೇವತೆಯನ್ನು ಪೂಜಿಸಿದರೆ, ಧನ-ಧಾನ್ಯಗಳು ವೃದ್ದಿಯಾಗುತ್ತದೆ.

PR
ದ್ವಿತೀಯ ತಿಥಿಯ ಅಧಿದೇವತೆ ಬ್ರಹ್ಮನಾಗಿದ್ದು, ದ್ವಿತೀಯ ತಿಥಿದಿವಸ ಬ್ರಹ್ಮನನ್ನು ಪೂಜಿಸಿದರೆ ವಿದ್ಯೆಯಲ್ಲಿ ಪಾರಂಗತರಾಗುತ್ತಾರೆ.

ತೃತೀಯ ತಿಥಿಯ ಅಧಿ ದೇವತೆ ಕುಬೇರನಾಗಿದ್ದು, ತೃತಿಯ ತಿಥಿದಿವಸ ಕುಬೇರನನ್ನು ಪೂಜಿಸಿದರೆ. ವಾಣಿಜ್ಯೌದ್ಯಮದಲ್ಲಿ ಅಭಿವೃದ್ದಿ ಉಂಟಾಗುತ್ತದೆ. ಕೆಲಸ ಹುಡುಕುವವರಿಗೆ ಅನುಕೂಲವಾಗುತ್ತದೆ.

ಚತುರ್ಥಿ ತಿಥಿಯ ಅಧಿದೇವತೆ ಗಣಪತಿಯಾಗಿದ್ದು, ಚತುರ್ಥಿ ತಿಥಿ ದಿವಸ ಗಣಪತಿಯನ್ನು ಪೂಜಿಸಿದರೆ ಎಲ್ಲಾ ವಿಘ್ನಗಳು ಪರಿಹಾರವಾಗುತ್ತದೆ.

PR
ಪಂಚಮಿ ತಿಥಿಯ ಅಧಿದೇವತೆ ನಾಗರಾಜ (ಸರ್ಪಗಳರಾಜ) ನಾಗಿದ್ದು, ಪಂಚಮಿ ತಿಥಿ ದಿವಸ ನಾಗರಾಜನನ್ನು ಪೂಜಿಸಿದರೆ, ಸರ್ಪದೋಷದಿಂದ ಉಂಟಾಗಿರುವ, ವಿಷದ ಭಯ, ವಿವಾಹವಾಗದೆ ಇರುವವರು, ಸಂತಾನ ಇಲ್ಲದವರು, ಆರ್ಥಿಕ ಮುಗ್ಗಟ್ಟು ಇವುಗಳು ನಿವಾರಣೆಯಾಗುತ್ತದೆ.

ಷಷ್ಟಿ ತಿಥಿಯ ಅಧಿದೇವತೆ ಕಾರ್ತಿಕೇಯನಾಗಿದ್ದು, ಷಷ್ಟಿ ತಿಥಿಯ ದಿವಸ ಕಾರ್ತಿಕೇಯನನ್ನು ಪೂಜಿಸಿದರೆ, ಆರೋಗ್ಯ ವೃದ್ದಿ, ಆಯಸ್ಸು ವೃದ್ದಿ, ಸಾಮರ್ಥ್ಯ, ಪ್ರಸಿದ್ದಿ ಹೊಂದುತ್ತಾರೆ.

ಸಪ್ತಮಿ ತಿಥಿಯ ಅಧಿದೇವತೆ ಸೂರ್ಯನಾಗಿದ್ದು, ಸಪ್ತಮಿ ತಿಥಿ ದಿವಸ ಸೂರ್ಯನಾರಾಯಣನನ್ನು (ಚಿರಭಾನು) ಪೂಜಿಸಿದರೆ ಎಲ್ಲಾ ರೀತಿಯ ರಕ್ಷಣೆಯನ್ನು ನೀಡುತ್ತಾನೆ.

PR
ಅಷ್ಟಮಿ ತಿಥಿಯ ಅಧಿದೇವತೆ ರುದ್ರ (ಶಿವ) ನಾಗಿದ್ದು, ಅಷ್ಟಮಿ ತಿಥಿಯ ದಿವಸ ರುದ್ರನನ್ನು ಪೂಜಿಸಿದರೆ, ಆಕಸ್ಮಿಕ ಅಪಘಾತಗಳು ನಿವಾರಣೆಯಾಗಿ, ಜ್ಞಾನಾಭಿವೃದ್ದಿ ಉಂಟಾಗುತ್ತದೆ.

ನವಮಿ ತಿಥಿಯ ಅಧಿದೇವತೆ ದುರ್ಗಾದೇವಿಯಾಗಿದ್ದು, ನವಮಿ ತಿಥಿಯ ದಿವಸ ದುರ್ಗಾದೇವಿಯನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಶತ್ರುವಿನ ಮೇಲೆ ಜಯ ಉಂಟಾಗುತ್ತದೆ.

ದಶಮಿ ತಿಥಿಯ ಅಧಿದೇವತೆ ಯಮನಾಗಿದ್ದು, ದಶಮಿ ತಿಥಿಯ ದಿವಸ ಯಮನನ್ನು ಪೂಜಿಸಿದರೆ, ಮಾರಣಾಂತಿಕ ಹಂತದಲ್ಲಿರುವ ರೋಗಗಳಿಂದ ಗುಣ ಹೊಂದುತ್ತಾರೆ.

ವೆಬ್ದುನಿಯಾವನ್ನು ಓದಿ