ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಗುರುವಾರ, 6 ಫೆಬ್ರವರಿ 2014 (13:15 IST)
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ಪ್ರಕಾರ ಈ ಎಲ್ಲ ದೋಷಗಳಿಗೂ ಮೂಲ ಕಾರಣವನ್ನು ಹುಡುಕಿ ಅದಕ್ಕೆ ಪರಿಹಾರ ಮಾರ್ಗವನ್ನು ನೀಡುವ ನಿಟ್ಟಿನಲ್ಲಿ ಜ್ಯೋತಿಷ್ಯಶಾಸ್ತ್ರ ಪ್ರಮುಖವಾದ ಪಾತ್ರವಹಿಸುತ್ತದೆ. ವಿಶೇಷವಾಗಿ ಇಂದು ಬಹಳಷ್ಟು ಜನರು ನಾಗಸಂಬಂಧಿ ದೋಷಗಳಿಂದ ಬಳಲುತ್ತಾರೆ.ಇದಕ್ಕೆ ಹಲವು ಬಗೆಯ ಕಾರಣವಿದ್ದು ಅದನ್ನು ಸಮಗ್ರವಾಗಿ ಜೋತಿಷ್ಯ ಶಾಸ್ತ್ರದ ಪ್ರಕಾರ ಅಧ್ಯಯಿಸಿ ಪರಿಹಾರ ನೀಡಲಾಗುತ್ತದೆ.

ಏನಿದು ನಾಗ ದೋಷ?

ಹೆಸರೇ ಸೂಚಿಸುವಂತೆ ಅಷ್ಟಕುಲನಾಗನಿಗೆ ಸಂಬಂಧಿಸಿದಂತೆ, ಮಾನವನಿಗೆ ಈ ದೋಷ ಕಂಡುಬರುತ್ತದೆ.ಇದರಲ್ಲಿ ಪ್ರಮುಖವಾಗಿ ನಾಗಹತ್ಯಾದೋಷ,ನಾಗಕೇತ್ರಗಳ ಬದಲಾವಣೆ,ನಾಗಕ್ಷೇತ್ರಗಳ ಅಪವಿತ್ರತೆ,ನಾಗವಿಗ್ರಹಗಳ ಭಗ್ನತೆ,ಪೂಜಾ ಕೈಂಕರ್ಯದ ದೋಷ, ಸರ್ಪಗಳನ್ನು ಗಾಯಗೊಳಿಸಿರುವುದು ಹೀಗೆ ಹಲವು ಬಗೆಯ ನಾಗವಿರೋಧಿ ಚಟುವಟಿಕೆಯಿಂದ ಈ ದೋಷಗಳು ಕಂಡುಬರುತ್ತವೆ. ಕೆಲವೊಮ್ಮೆ ಪೂರ್ವಜನ್ಮ ಸಂಬಂಧಿಯಾದ ನಾಗದೋಷವೂ,ಕುಟುಂಬ ಸಂಬಂಧಿ

ವೆಬ್ದುನಿಯಾವನ್ನು ಓದಿ