ಯಾವಾಗ ವಿವಾಹವಾದರೆ ಸೂಕ್ತ?

ಭಾರತಿ ಪಂಡಿತ್

ND
ಯಾವುದೇ ಯುವಕ ಯುವತಿಯರಲ್ಲಿ ನನ್ನ ಮದುವೆ ಯಾವಾಗ ಆಗಬಹುದು, ಮದುವೆಯ ನಂತರ ನಾನು ಚೆನ್ನಾಗಿರುತ್ತೇನೆಯೇ ಎಂಬಿತ್ಯಾದಿ ಗೊಂದಲಗಳು, ಭಯ, ಆತಂಕಗಳೂ ಸಹಜ. ಆದರೆ ಎಷ್ಟೇ ಪ್ರಯತ್ನ ನಡೆಸಿದರೂ, ಜನ್ಮಕುಂಡಲಿಯಲ್ಲಿ ವಿವಾಹ ಯೋಗ ಇದ್ದಾಗಲಷ್ಟೆ ಮದುವೆಯಾಗುವ ಯೋಗ ಕೂಡಿಬರಬಹುದಷ್ಟೆ. ಕುಂಡಲಿಯಲ್ಲಿ ವಿವಾಹ ಯೋಗ ಗೋಚರವಾದರೆ ಅಂಥ ಸಂದರ್ಭದಲ್ಲಿ ಮದುವೆ ಮಾಡುವುದು ಸೂಕ್ತ.

1. ಸಪ್ತಮ ಸ್ಥಾನ. 2. ಶುಕ್ರ ಹಾಗೂ ಅವನ ಸಪ್ತಮ ಸ್ಥಾನ. 3. ಸಪ್ತಮೇಶನ ಸ್ಥಿತಿ. 4. ಸಪ್ತಮೇಶನ ಮೇಲೆ ಉಳಿದ ಗ್ರಹಗಳ ಯೋಗ, ಪ್ರಭಾವ. 6. ಚಂದ್ರನ ಸಪ್ತಮ ಸ್ಥಿತಿ. 7. ಶುಕ್ರನ ಸ್ಥಿತಿ. 8. ಶುಕ್ರ, ಸಪ್ತಮೇಶ ಹಾಗೂ ಚಂದ್ರನಲ್ಲಿ ಸಪ್ತಮನ ಸ್ಥಿತಿ. 9. ಶುಕ್ರನ ಮೇಲೆ ಉಳಿದ ಗ್ರಹಗಳ ಪ್ರಭಾವ.

ಈ ಎಲ್ಲಾ ಸ್ಥಿತಿಗಳಲ್ಲಿ ಅನುಕೂಲ ವಾತಾವರಣ ಕಂಡುಬಂದರಷ್ಟೆ ವಿವಾಹ ಸುಖೀ ಜೀವನವಾಗುತ್ತದೆ. ಇಲ್ಲವಾದರೆ ಪಾಪ ಪ್ರಭಾವದಿಂದ ಬಹಳ ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ವಿವಾಹ ಯೋಗ ಕೂಡಿ ಬರುವುದು ಯಾವಾಗ?: ವಿವಾಹ ಯೋಗ ನೋಡಲು ಮೊದಲು ಗುರುವಿನ ಗೋಚರವೇ ಪ್ರಮುಖವಾಗಿರುತ್ತದೆ. ಗುರು ಸಪ್ತಮ ಸ್ಥಾನದಲ್ಲಿ ಶುಭ ದೃಷ್ಟಿಯನ್ನು ಹೊಂದಿದ್ದರೆ ಅಥವಾ ಸಪ್ತಮೇಶ ಶುಭಕಾರಕನಾಗಿದ್ದರೆ ಅಥವಾ ಜನ್ಮಕುಂಡಲಿಯ ಮೂಲ ಗುರು ಸ್ಥಾನದಲ್ಲಿ ತಿರುಗುತ್ತಿದ್ದರೆ ವಿವಾಹಯೋಗವಿದೆ ಎಂದರ್ಥ. ಇದಲ್ಲದೆ ಲಗ್ನಾಧಿಪತಿಯ ಮಹಾದೆಶೆಯಲ್ಲಿ ಸಪ್ತಮೇಶ ಹಾಗೂ ಪಂಚಮೇಶನ ಅಂತರ ಕಂಡುಬಂದರೆಯೂ ವಿವಾಹ ಯೋಗ ಕೂಡಿ ಬರುತ್ತದೆ.

ವಿವಾಹ ವಿಳಂಬ ಯಾಕೆ?: ಕೆಲವರಿಗೆ ವಿವಾಹ ಅವಕಾಶಗಳು ಬಂದರೂ, ಹಲವು ಬಾರಿ ತಪ್ಪುತ್ತಲೇ ಇರುತ್ತದೆ ಅಥವಾ ಕೂಡಿಯೇ ಬರುವುದಿಲ್ಲ. ಬಹುಕಾಲದಿಂದ ವಿವಾಹ ವಿಳಂಬವಾಗುತ್ತಲೇ ಇರುತ್ತದೆ. ಇಂತಹ ಸ್ಥಿತಿ ಯಾಕೆ ಬರುತ್ತದೆಂದರೆ, ಸಪ್ತಮ ಶನಿಯ ದೃಷ್ಟಿಯಿಂದ ಪ್ರಭಾವಿತನಾಗಿದ್ದರೆ, ಸಪ್ತಮದಲ್ಲಿ ಮಂಗಳನಿದ್ದರೆ, ಅಥವಾ ಸಪ್ತಮನಲ್ಲಿ ರಾಹುವಿದ್ದರೆ ವಿವಾಹ ವಿಳಂಬವಾಗುತ್ತದೆ. ಸಪ್ತಮನ ಕೇತು, ಯುರೇನಸ್ ಕೂಡಾ ವಿವಾಹದೆಡೆಗೆ ಉದಾಸೀನತೆ ತೋರಿಸುತ್ತವೆ. ಸಪ್ತಮನಲ್ಲಿ ನೆಪ್ಚೂನ್ ಇದ್ದರೆ, ಇಂಥವರ ವಿವಾಹ ನಿಶ್ಚಯವಾದರೂ ಮುರಿದುಬೀಳುತ್ತಲೇ ಇರುತ್ತದೆ.