ಪ್ರೀತಿ. ಯಾರಿಗೆ ಆಗುವುದಿಲ್ಲ ಹೇಳಿ. ಇಂತಹ ಪ್ರೀತಿಯ ಬಗ್ಗೆ, ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯದಲ್ಲೂ ಕೆಲವಾರು ವಿವರಗಳು ಸಿಗುತ್ತವೆ.

ಶನಿವಾರ, 1 ಫೆಬ್ರವರಿ 2014 (11:35 IST)
PR
ವರ್ತಮಾನದ ಆಧುನಿಕತೆ ಪ್ರವೇಶ, ಬಿಚ್ಚುಸಂಸ್ಕೃತಿ, ಟಿವಿ, ಸಿನಿಮಾ, ವ್ಯಾಲೆಂಟೈನ್ ಡೇ... ನಮ್ಮ ಸಂಸ್ಕೃತಿ ಹಲವನ್ನು ಒಳಗೊಂಡು ಮುಂದೆ ಹೋಗುತ್ತಲೇ ಇದೆ. ಹೀಗಾಗಿ ಪ್ರೀತಿ, ಪ್ರೇಮಗಳ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಜತೆಗೆ ಪ್ರೇಮ ವಿವಾಹ ಬೆಳೆದಂತೆಯೇ ವಿಚ್ಚೇದನವೂ ಹೆಚ್ಚಾಗುತ್ತಲೇ ಇವೆ.

ಯಾವ ಗ್ರಹಗಳ ಕಾರಣದಿಂದ ವ್ಯಕ್ತಿಯೊಬ್ಬ ಪ್ರೇಮಕ್ಕೆ ಬೀಳುತ್ತಾನೋ.. ಅದೇ ಗ್ರಹಗಳ ಕಾರಣದಿಂದಲೇ ಆ ವ್ಯಕ್ತಿ ತನ್ನ ಪ್ರೇಮದಲ್ಲಿ ವಿಫಲನೂ/ಳೂ ಆಗುತ್ತಾನೆ/ಳೆ ಎಂಬುದು ಜ್ಯೋತಿಷ್ಯದ ವಿಶೇಷ ಕುತೂಹಲಕರ ವಿಷಯ. ಪ್ರೇಮ ವಿವಾಹಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟ ವಿವರಗಳು ಸಿಗದಿದ್ದರೂ, ಪ್ರೇಮ ವಿವಾಹ ಯಾಕೆ ಸಫಲವಾಗುವುದು ಕಡಿಮೆ ಎಂಬುದಕ್ಕೆ ಹಲವು ಕಾರಣಗಳು ಸಿಗುತ್ತವೆ.

1. ಶುಕ್ರ ಅಥವಾ ಮಂಗಳನ ಸ್ಥಿತಿ ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯವುದೇ ಜಾತಕದ ಕುಂಡಲಿಯಲ್ಲಿ ಶುಕ್ರ ಹಾಗೂ ಮಂಗಳ ಅನುಕೂಲ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪ್ರೇಮ ಸಂಬಂಧದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಅಂದರೆ ಪ್ರೇಮ ವಿಫಲವಾಗಿ ನೋವಿನಲ್ಲಿ ನರಳಬೇಕಾಗುತ್ತದೆ.

2. ಸಪ್ತಮ ಭಾವ ಅಥವಾ ಸಪ್ತಮೇಶದ ಪಾಪ ಪೀಡಿತನಾದರೂ ಪ್ರೇಮ ವಿಫಲವಾಗುತ್ತದೆ. ಅಂದರೆ ಸಪ್ತಮೇಶ ಹಾಗೂ ಪಂಚಮೇಶಗಳ ಸ್ಥಿತಿ ಸಪ್ತಮ ಹಾಗೂ ಪಂಚಮದ ಜತೆ ಸಂಬಂಧ ಹೊಂದಿರದಿದ್ದಲ್ಲಿ ಪ್ರೇಮದಲ್ಲಿ ವಿರಸ ಉಂಟಾಗುತ್ತದೆ.

ವೆಬ್ದುನಿಯಾವನ್ನು ಓದಿ