ಬಾಗಷಃ (ಪಾರ್ಶ್ವ) ಸೂರ್ಯಗ್ರಹಣ

ಗುರುವಾರ, 30 ಜೂನ್ 2011 (20:32 IST)
PR
ಇದೇ ಜುಲೈ 1 ರಂದು ಬಾಗಷಃ(ಪಾರ್ಶ್ವ) ಸೂರ್ಯಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 156 ನೇಯದಾಗಿದ್ದು, 69 ಗ್ರಹಣಗಳಲ್ಲಿ ಇದು ಮೊದಲನೇಯದಾಗಿರುತ್ತದೆ. ಈ ಗ್ರಹಣವು ಹಿಂದು ಮಹಾಸಾಗರದ ದಕ್ಷಿಣ ಭಾಗದಲ್ಲಿ ಮಾತ್ರ ಗೋಚರಿಸುತ್ತದೆ. ಉಳಿದ ಭೂ ಪ್ರದೇಶಗಳಲ್ಲಿ ಈ ಸೂರ್ಯ ಗ್ರಹಣ ಕಂಡು ಬರುವುದಿಲ್ಲ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ 23 ನಿಮಿಷ 41 ಸೆಕೆಂಡಿಗೆ ಗ್ರಹಣದ ಸ್ಪರ್ಶ ಕಾಲವಾಗಿದ್ದು, ಮಧ್ಯಾಹ್ನ 2 ಗಂಟೆ 52 ನಿಮಿಷ 47 ಸೆಕೆಂಡಿಗೆ ಗ್ರಹಣ ಮೋಕ್ಷ ಕಾಲವಾಗಿರುತ್ತದೆ. ಈ ಗ್ರಹಣವು ಗೋಚರಿಸುವುದಿಲ್ಲವಾದ್ದರಿಂದ ಗ್ರಹಣದ ಆಚರಣೆ ಇರುವುದಿಲ್ಲ.

ಮುಂದಿನ ಗ್ರಹಣ ಭಾಗಷಃ ಸೂರ್ಯ ಗ್ರಹಣ ಇದೇ ನವೆಂಬರ್ 25 ರಂದು ಬೆಳಗ್ಗೆ 9 ಗಂಟೆ 53 ನಿಮಿಷಕ್ಕೆ ಸಂಭವಿಸುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಮತ್ತು ಇದೇ ಡಿಸೆಂಬರ್ 10 ರಂದು ಸಾಯಂಕಾಲ 6 ಗಂಟೆ 15 ನಿಮಿಷಕ್ಕೆ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಚಂದ್ರ ಗ್ರಹಣ ಭಾರತದಲ್ಲಿ ಕಂಡುಬರುತ್ತದೆ.

ಆರ್. ಸೀತಾರಾಮಯ್ಯ,
ಜ್ಯೊತೀಷ್ಕರು,
ಶಿವಮೊಗ್ಗ
ಮೊ: 9449048340

ವೆಬ್ದುನಿಯಾವನ್ನು ಓದಿ